ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್‌: ಗುರು‍ಪ್ರೀತ್ ಒಪ್ಪಂದ ವಿಸ್ತರಣೆ

Last Updated 3 ಫೆಬ್ರುವರಿ 2023, 12:53 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫ್ರಾಂಚೈಸ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಜೊತೆಗೆ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಒಪ್ಪಂದ ಐದು ವರ್ಷ ವಿಸ್ತರಣೆಯಾಗಿದೆ.

ಭಾರತ ರಾಷ್ಟ್ರೀಯ ತಂಡದ ಗೋಲ್‌ಕೀಪರ್ ಆಗಿರುವ ಗುರುಪ್ರೀತ್, ತಾವು 31ನೇ ವಯಸ್ಸಿಗೆ ಕಾಲಿಡುವ ದಿನವೇ ಒಪ್ಪಂದ ವಿಸ್ತರಿಸಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಅವರು 2028ರವರೆಗೆ ಕ್ಲಬ್ ಪರ ಆಡಲಿದ್ದಾರೆ.

ಗುರುಪ್ರೀತ್ ಅವರು 2017ರಲ್ಲಿ ಬಿಎಫ್‌ಸಿ ಸೇರಿದ್ದರು.

ಭಾರತ ತಂಡದ ಪರ ಅವರು 50ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಐಎಸ್‌ಎಲ್‌ ಟೂರ್ನಿಯಲ್ಲಿ 108 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಮಾರ್ಚ್‌ 18ರಂದು ಐಎಸ್‌ಎಲ್‌ ಫೈನಲ್‌: ಈ ಬಾರಿಯ ಐಎಸ್‌ಎಲ್ ಟೂರ್ನಿಯ ಫೈನಲ್‌ ಮಾರ್ಚ್‌ 18ರಂದು ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

ಲೀಗ್ ಹಂತದ ಪಂದ್ಯಗಳು ಮುಗಿದ ಬಳಿಕ ಮಾರ್ಚ್‌ 3 ಮತ್ತು 4ರಂದು ಎರಡು ಪ್ಲೇ ಆಫ್‌ ಪಂದ್ಯಗಳು ನಡೆಯಲಿವೆ. ಈ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಹಾಗೂ ಮೂರು ಮತ್ತು ಆರನೇ ಸ್ಥಾನ ಗಳಿಸಿದ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ನಾಲ್ಕು ಸೆಮಿಫೈನಲ್‌ ಪಂದ್ಯಗಳು (ಹೋಮ್ ಆ್ಯಂಡ್‌ ಅವೇ) ಮಾರ್ಚ್‌ 7,9,12 ಮತ್ತು 13ರಂದು ನಿಗದಿಯಾಗಿವೆ.

ಹೊಸ ಮಾದರಿಯ ಪ್ರಕಾರ ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಮೂರರಿಂದ ಆರನೇ ಸ್ಥಾನ ಪಡೆಯುವ ತಂಡಗಳನ್ನು ಸಿಂಗಲ್ ಲೆಗ್‌ ‍ಪ್ಲೇ ಆಫ್‌ನಲ್ಲಿ ಆಡಿಸಲಾಗುತ್ತದೆ. ಈ ಪಂದ್ಯಗಳಲ್ಲಿ ಗೆದ್ದ ತಂಡಗಳು ನಾಲ್ಕರ ಘಟ್ಟ ತಲುಪಲಿವೆ.

ಫೈನಲ್‌ ಪಂದ್ಯದ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT