ಮಂಗಳವಾರ, ನವೆಂಬರ್ 24, 2020
26 °C

ಜನವರಿ 9ರಿಂದ ಐ–ಲೀಗ್‌ ಫುಟ್‌ಬಾಲ್‌ ಟೂರ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 14ನೇ ಆವೃತ್ತಿಯ ಐ–ಲೀಗ್ ಫುಟ್‌ಬಾಲ್‌ ಟೂರ್ನಿಯು ಮುಂದಿನ ವರ್ಷದ ಜನವರಿ 9ರಂದು ಕೋಲ್ಕತ್ತದಲ್ಲಿ ಆರಂಭಗವಾಗಲಿದೆ. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಶನಿವಾರ ಈ ವಿಷಯ ತಿಳಿಸಿದೆ.

ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ತಾವು ಆಡಲಿರುವ ಪಂದ್ಯಗಳ ವೇಳಾಪಟ್ಟಿಗೆ ಅನುಸಾರ 14 ದಿನ ಜೀವಸುರಕ್ಷಾ ವಾತಾವರಣದಲ್ಲಿ (ಬಯೋಸೆಕ್ಯೂರ್‌) ಇರಬೇಕಾಗುತ್ತದೆ. 1ಸ್ಪೋರ್ಟ್ಸ್ ಪಂದ್ಯಗಳ ನೇರ ಪ್ರಸಾರ ಮಾಡಲಿದೆ.

ಹಿಂದಿನ ಆವೃತ್ತಿಯ ಎರಡನೇ ಹಂತದ ಲೀಗ್‌ ಪಂದ್ಯಗಳನ್ನು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಕ್ವಾಲಿಫೈಯರ್‌ ಪಂದ್ಯಗಳ ಮೂಲಕ ಫುಟ್‌ಬಾಲ್ ಚಟುವಟಿಕೆಗಳು ಪುನರಾರಂಭಗೊಂಡಿದ್ದವು.

2020–21ರ ಋತುವಿನ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳು ಪರಸ್ಪರ ಒಂದು ಬಾರಿ ಮುಖಾಮುಖಿಯಾಗಲಿವೆ. ಬಳಿಕ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

ಪಾಯಿಂಟ್ಸ್‌ ಪಟ್ಟಿಯ ಅಗ್ರ ಆರು ಸ್ಥಾನಗಳನ್ನು ಗಳಿಸುವ ತಂಡಗಳು ಮತ್ತೊಮ್ಮ ಪರಸ್ಪರ ಸೆಣಸಲಿವೆ. ಈ ಪಂದ್ಯಗಳ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇತರ ಐದು ತಂಡಗಳು ಒಂದು ಲೀಗ್‌ ಮಾದರಿಯಲ್ಲಿ ಪರಸ್ಪರ ಆಡಲಿವೆ.

ತಾನಾಡಿದ ಎಲ್ಲ 15 ಪಂದ್ಯಗಳಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಕಲೆಹಾಕುವ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಕೋವಿಡ್‌–19 ಮಾರ್ಗಸೂಚಿಗಳನ್ನು ಅನುಸರಿಸಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.