ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭಾರತಕ್ಕೆ ಮೊದಲ ಜಯ

ಸುನಿಲ್ ಚೆಟ್ರಿ ಗಳಿಸಿದ ಗೆಲುವಿನ ಗೋಲು; ಫೈನಲ್ ಆಸೆ ಜೀವಂತ
Last Updated 11 ಅಕ್ಟೋಬರ್ 2021, 4:07 IST
ಅಕ್ಷರ ಗಾತ್ರ

ಮಾಲಿ: ಭಾರತ ತಂಡ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕೊನೆಗೂ ಜಯ ಗಳಿಸಿತು. ಹಿಂದಿನ ಎರಡು ಪಂದ್ಯಗಳಲ್ಲಿ ಡ್ರಾಗೆ ಸಮಾಧಾನಪಟ್ಟುಕೊಂಡಿದ್ದ ತಂಡ ಭಾನುವಾರ ನಡೆದ ಪಂದ್ಯದಲ್ಲಿ ನೇಪಾಳವನ್ನು 1–0 ಅಂತರಲ್ಲಿ ಮಣಿಸಿ ಫೈನಲ್ ಕನಸು ಜೀವಂತವಾಗಿರಿಸಿಕೊಂಡಿತು.

ಮಾಲ್ಡಿವ್ಸ್ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿಯ ಪೈಪೋಟಿ ನಡೆಸಿದವು. ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಭರವಸೆಯಲ್ಲಿದ್ದ ನೇಪಾಳ ನಿರಾಯಾಸವಾಗಿ ಆಡಿತು. ಫೈನಲ್ ಪ್ರವೇಶದ ಕನಸು ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದ ಭಾರತ ಆಕ್ರಮಣಕ್ಕೆ ಒತ್ತು ನೀಡಿತು.

ಪಂದ್ಯದಲ್ಲಿ ಭಾರತಕ್ಕೆ ಗೋಲು ಗಳಿಸಲು ಅನೇಕ ಅವಕಾಶಗಳು ಲಭಿಸಿದ್ದವು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. 82ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಬ್ರೆಂಡನ್ ನೀಡಿದ ಪಾಸ್‌ನಲ್ಲಿ ಫಾರೂಕ್ ಚೌಧರಿ ಅವರುಚೆಂಡನ್ನು ಹೆಡ್ ಮಾಡಿದರು. ಅದು ನೇರವಾಗಿ ಸುನಿಲ್ ಚೆಟ್ರಿ ಬಳಿಗೆ ಸಾಗಿತು. ಚೆಟ್ರಿ ಸುಲಭವಾಗಿ ಗೋಲು ಗಳಿಸಿ ಭಾರತಕ್ಕೆ ಜಯದ ಕಾಣಿಕೆ ನೀಡಿದರು.

ಮೂರು ಪಂದ್ಯಗಳಲ್ಲಿ ತಲಾ ಎರಡನ್ನು ಗೆದ್ದಿರುವ ಮಾಲ್ಡಿವ್ಸ್ ಮತ್ತು ನೇಪಾಳ ಪಾಯಿಂಟ್ ಪಟ್ಟಿಯ ಅಗ್ರ ಎರಡು ಸ್ಥಾನಗಳಲ್ಲಿದ್ದು ಭಾರತ ಮೂರನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಮಾಲ್ಡಿವ್ಸ್ ಎದುರು ಜಯ ಗಳಿಸಿದರೆ ತಂಡ ಫೈನಲ್‌ ಪ್ರವೇಶಿಸಲಿದೆ. ಈ ಪಂದ್ಯ ಮುಂದಿನ ಬುಧವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT