ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ ಶುಭಾರಂಭ

15 ವರ್ಷದೊಳಗಿನವರ ಸ್ಯಾಫ್‌
Last Updated 9 ಅಕ್ಟೋಬರ್ 2019, 16:11 IST
ಅಕ್ಷರ ಗಾತ್ರ

ಥಿಂಪು, ಭೂತಾನ್‌: ಭಾರತ ತಂಡ ಸ್ಯಾಫ್‌ 15 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ. ಇಲ್ಲಿಯ ಚಲಿಮಿತಾಂಗ್‌ ಕ್ರೀಡಾಂಗಣದಲ್ಲಿ ಬಧವಾರ ನಡೆದ ಪಂದ್ಯದಲ್ಲಿ ನೇಪಾಳ ತಂಡವನ್ನು 4–1ರಿಂದ ಮಣಿಸಿತು.

ಭಾರತದ ಪರ ಸ್ಟ್ರೈಕರ್‌ ಲಿಂಡಾ ಕೊಮ್‌ ಸರ್ಟೊ (38 ಹಾಗೂ 56ನೇ ನಿಮಿಷ) ಎರಡು ಗೋಲು ಬಾರಿಸಿ ಗಮನಸೆಳೆದರು. ಸುಮತಿ ಕುಮಾರಿ (7ನೇ ನಿಮಿಷ) ಒಂದು ಗೋಲು ದಾಖಲಿಸಿದರೆ ಮತ್ತೊಂದು ಗೋಲು ಬಾರಿಸಲು ನೆರವು ನೀಡಿದರು. ಪ್ರಿಯಾಂಕಾ ಸುಜೀಶ್‌ (66ನೇ ನಿಮಿಷ) ಮೂಲಕ ಭಾರತಕ್ಕೆ ಮತ್ತೊಂದು ಯಶಸ್ಸು ದೊರೆಯಿತು.

ನೇಪಾಳ ಪರ ಮನ್‌ ಮಾಯಾ ದಮಾಯ್‌ (62ನೇ ನಿಮಿಷ) ಸಮಾಧಾನಕರ ಗೋಲು ದಾಖಲಿಸಿದರು.

ನೇಪಾಳದ ರಕ್ಷಣಾ ಕೋಟೆ ಭೇದಿಸಿದ ಸುಮತಿ ಕುಮಾರಿ ಆರಂಭದಲ್ಲೇ ಗೋಲು ದಾಖಲಿಸಿದರು.ಸುಮತಿ ಕುಮಾರಿ ನೀಡಿದ ಪಾಸ್‌ನಲ್ಲಿ 38ನೇ ನಿಮಿಷದಲ್ಲಿ ಲಿಂಡಾ, ನೇಪಾಳ ಗೋಲಿಯನ್ನು ವಂಚಿಸಿದರು.

ದ್ವಿತೀಯಾರ್ಧದಲ್ಲೂ ಭಾರತ ಉತ್ತಮ ಲಯ ಮುಂದುವರಿಸಿತು. ಲಿಂಡಾ ಹಾಗೂ ಸುಮತಿ ಅವರ ಸಂಯೋಜನೆಯಲ್ಲಿ ಮತ್ತೊಂದು ಗೋಲು ದಾಖಲಾಯಿತು. ಮನ್‌ ಮಾಯಾ ಮೂಲಕ ನೇಪಾಳ ಹಿನ್ನಡೆಯನ್ನು ತಗ್ಗಿಸಿಕೊಂಡಿತು. ಈ ವೇಳೆ ಭಾರತ 3–1ರ ಮುನ್ನಡೆಯಲ್ಲಿತ್ತು. ಕೊನೆಯಲ್ಲಿ ಪ್ರಿಯಾಂಕಾ ಯಶಸ್ಸು ಸಾಧಿಸುವ ಮೂಲಕ ತಂಡದ ಮುನ್ನಡೆ ಹೆಚ್ಚಿಸಿದರು.

ಶುಕ್ರವಾರ ಭಾರತ ತಂಡ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಭೂತಾನ್‌ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT