ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಬಾಂಗ್ಲಾ ವಿರುದ್ಧ ಸುಲಭ ಜಯ

Published 21 ಸೆಪ್ಟೆಂಬರ್ 2023, 13:58 IST
Last Updated 21 ಸೆಪ್ಟೆಂಬರ್ 2023, 13:58 IST
ಅಕ್ಷರ ಗಾತ್ರ

ಕಠ್ಮಂಡು: ಭಾರತ ತಂಡ, ಗುರುವಾರ ನಡೆದ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.

ದಶರಥ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಪರ ಜಿ.ಗೊಯರಿ, ನವೋಬಾ ಮೀಥಿ ಪಾಂಗಮ್‌ಬಮ್ ಮತ್ತು ಅರ್ಜುನ್‌ ಸಿಂಗ್ ಒಯಿನಮ್ ಅವರು ಗೋಲುಗಳನ್ನು ಗಳಿಸಿದರು. ‘ಬಿ’ ಗುಂಪಿನಲ್ಲಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಸೆ. 25ರಂದು ಭೂತಾನ್ ವಿರುದ್ಧ ಆಡಲಿದ್ದು, ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿದೆ.

‘ಎ’ ಗುಂಪಿನಲ್ಲಿ ಆತಿಥೇಯ ನೇಪಾಳದ ಜೊತೆ ಮಾಲ್ಡೀವ್ಸ್‌, ಪಾಕಿಸ್ತಾನ ತಂಡಗಳಿವೆ. ಎರಡು ಗುಂಪುಗಳಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಹಂತಕ್ಕೆ ಮುನ್ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT