ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ– ಮ್ಯಾನ್ಮಾರ್‌ ಮಹಿಳಾ ಫುಟ್‌ಬಾಲ್‌ ಪಂದ್ಯ ಇಂದು

Published 8 ಜುಲೈ 2024, 21:42 IST
Last Updated 8 ಜುಲೈ 2024, 21:42 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡ ಯಾಂಗೂನ್‌ನ ತುವುನ್ನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಮಹಿಳಾ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ತಂಡವನ್ನು ಎದುರಿಸಲಿದೆ. ಭಾರತ ಈ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ವಿಶ್ವ ಕ್ರಮಾಂಕದಲ್ಲಿ 67ನೇ ಸ್ಥಾನದಲ್ಲಿರುವ ಭಾರತ, ಈ ಹಿಂದೆ ಮ್ಯಾನ್ಮಾರ್‌ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಒಂದರಲ್ಲೂ ಜಯಗಳಿಸಿಲ್ಲ. ನಾಲ್ಕು ಪಂದ್ಯಗಳನ್ನು ಸೋತು ಒಂದರಲ್ಲಿ ‘ಡ್ರಾ’ ಮಾಡಿಕೊಂಡಿದೆ. ಮ್ಯಾನ್ಮಾರ್ ವಿಶ್ವಕ್ರಮಾಂಕದಲ್ಲಿ 54ನೇ ಸ್ಥಾನದಲ್ಲಿದೆ.

ಐದು ವರ್ಷಗಳ ಹಿಂದೆ ಮಂದಾಲಯದಲ್ಲಿ ನಡೆದ ಎಎಫ್‌ಸಿ ಮಹಿಳಾ ಒಲಿಂಪಿಕ್‌ ಕ್ವಾಲಿಫೈಯರ್ಸ್‌ನಲ್ಲಿ 3–3 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಈಗಿನ ತಂಡದಲ್ಲೂ ಇರುವ ಸಂಧ್ಯಾ ರಂಗನಾಥನ್, ಸಂಜು ಮತ್ತು ನೊಂಗ್‌ಮೈಥೆಮ್‌ ರತ್ನಬಾಲಾ ದೇವಿ 2019ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಗೋಲು ಹೊಡೆದಿದ್ದರು.

ಮಂಗಳವಾರದ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT