ಡೇಲಿಯನ್, ಚೀನಾ: ಭಾರತ ತಂಡವು ಎಎಫ್ಸಿ 23 ವರ್ಷದೊಳಗಿನವರ ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಅಭಿಯಾನವನ್ನು ಎರಡನೇ ಸೋಲಿನೊಂದಿಗೆ ಕೊನೆಗೊಳಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡದವರು 0–3ರಿಂದ ಯುಎಇ ತಂಡಕ್ಕೆ ಸುಲಭವಾಗಿ ಸೋತರು. ಮೊದಲ ಪಂದ್ಯದಲ್ಲಿ ಭಾರತವು 1–2ರಿಂದ ಆತಿಥೇಯ ಚೀನಾ ವಿರುದ್ಧ ಮುಗ್ಗರಿಸಿತ್ತು.

ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಇದು ‘ಮಾಡು ಇಲ್ಲವೆ ಮಡಿ’ ಪಂದ್ಯವಾಗಿತ್ತು. ಆದರೆ, ಭಾರತದ ಡಿಫೆಂಡರ್ಗಳು ಗೊಂದಲಕ್ಕೆ ಒಳಗಾದ ಕಾರಣ ಯುಎಇ 26ನೇ ನಿಮಿಷದಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಯುಎಇ ಪರ ಮೊಹಮ್ಮದ್ ಅಬ್ಬಾಸ್ (26ನೇ), ಸುಲ್ತಾನ್ ಆದಿಲ್ ಅಲಮೇರಿ (33ನೇ) ಮತ್ತು ಈಸಾ ಖಾಲ್ಫಾನ್ (64) ಚೆಂಡನ್ನು ಗುರಿ ಸೇರಿಸಿ ಮಿಂಚಿದರು.

‘ಜಿ’ ಗುಂಪಿನಲ್ಲಿ ಯುಎಇ ತಂಡವು ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೀನಾ ತಂಡ ಎರಡನೇ ಸ್ಥಾನದಲ್ಲಿದ್ದರೆ, ಭಾರತ ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.