ಮಂಗಳವಾರ, ಸೆಪ್ಟೆಂಬರ್ 17, 2019
21 °C
ಕಿಂಗ್ಸ್‌ ಕಪ್‌ ಫುಟ್ಬಾಲ್: ಜೂನ್‌ 5ರಿಂದ ಥಾಯ್ಲೆಂಡ್‌ನಲ್ಲಿ 47ನೇ ಆವೃತ್ತಿಯ ಟೂರ್ನಿ

ಭಾರತಕ್ಕೆ ಕ್ಯುರಸೊವ್‌ ಮೊದಲ ಎದುರಾಳಿ

Published:
Updated:
Prajavani

ನವದೆಹಲಿ: ನಾಲ್ಕು ದಶಕಗಳ ನಂತರ ಕಿಂಗ್ಸ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡ ಕೆರಿಬಿಯನ್‌ ನಾಡಿನ ಕ್ಯುರಸೊವ್ ಎದುರು ಮೊದಲ ಪಂದ್ಯ ಆಡಲಿದೆ.

ಜೂನ್‌ ಐದರಂದು ಥಾಯ್ಲೆಂಡ್‌ನ ಬುರಿರಮ್‌ನಲ್ಲಿ 47ನೇ ಆವೃತ್ತಿಯ ಟೂರ್ನಿಗೆ ಚಾಲನೆ ಸಿಗಲಿದ್ದು ಥಾಯ್ಲೆಂಡ್‌ ಫುಟ್ಬಾಲ್‌ ಸಂಸ್ಥೆ ಬುಧವಾರ ವೇಳಾ‍ಪಟ್ಟಿ ಬಿಡುಗಡೆಗೊಳಿಸಿದೆ. ನಾಲ್ಕು ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಆತಿಥೇಯ ಥಾಯ್ಲೆಂಡ್‌ ಮೊದಲ ಪಂದ್ಯದಲ್ಲಿ ವಿಯೆಟ್ನಾಂ ಎದುರು ಸೆಣಸಲಿದೆ. ಜೂನ್‌ ಎಂಟರಂದು ಫೈನಲ್‌ ಹಣಾಹಣಿ ನಡೆಯಲಿದೆ.

ಎಲ್ಲ ಪಂದ್ಯಗಳಿಗೂ ಬ್ಯುರಿರಮ್‌ನ ಚಾಂಗ್‌ ಅರೆನಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಫಿಫಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 101ನೇ ಸ್ಥಾನದಲ್ಲಿದೆ. ಥಾಯ್ಲೆಂಡ್‌ 114, ವಿಯೆಟ್ನಾಂ 98 ಹಾಗೂ ಕ್ಯುರಸೊವ್ 82ನೇ ಸ್ಥಾನದಲ್ಲಿವೆ. 1977ರಲ್ಲಿ ಕೊನೆಯ ಬಾರಿಗೆ ಭಾರತ ತಂಡ ಟೂರ್ನಿಯಲ್ಲಿ ಭಾಗವಹಿಸಿತ್ತು.

Post Comments (+)