ನವದೆಹಲಿ: ಖಾಲಿದ್ ಜಮೀಲ್ ಅವರು ಎರಡು ವರ್ಷಗಳ ಪೂರ್ಣ ಅವಧಿಗೆ ಭಾರತ ಸೀನಿಯರ್ ಫುಟ್ಬಾಲ್ ತಂಡದ ತರಬೇತುದಾರ ಹೊಣೆ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಬುಧವಾರ ತಿಳಿಸಿದೆ. ಫಲಿತಾಂಶಗಳನ್ನು ಆಧರಿಸಿ ಮತ್ತೊಂದು ವರ್ಷಕ್ಕೆ ಮುಂದುವರಿಯುವ ಆಯ್ಕೆಯೂ ಅವರ ಮುಂದಿದೆ.

ಐಎಸ್ಎಲ್ ತಂಡವಾದ ಜಮ್ಶೆಡ್ಪುರ ತಂಡದ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಅವರು ಎಐಎಫ್ಎಫ್ ಜೊತೆಗೆ ಪೂರ್ಣಾವಧಿ ಕೋಚ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಫೆಡರೇಷನ್ ತಿಳಿಸಿದೆ.

ಬೆಂಗಳೂರಿನ ಡ್ರಾವಿಡ್– ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆಗಸ್ಟ್ 15ರಿಂದ ತರಬೇತಿ ಶಿಬಿರ ನಡೆಸುವ ಮೂಲಕ ಅವರು ತಮ್ಮ ಕೆಲಸ ಆರಂಭಿಸಲಿದ್ದಾರೆ.

ತರಬೇತುದಾರರಾಗಿ ಅವರ ಪಾಲಿಗೆ ಸಿಎಎಫ್ಎ ನೇಷನ್ಸ್ ಕಪ್ ಟೂರ್ನಿಯು ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ.

ಅಕ್ಟೋಬರ್ನಲ್ಲಿ ಎಎಫ್ಸಿಎ ಏಷ್ಯನ್ ಕಪ್ (2027ರ) ಅರ್ಹತಾ ಟೂರ್ನಿಯಲ್ಲಿ ಭಾರತ ಆಡಲಿದೆ. ಸಿಂಗಪುರದಲ್ಲಿ ಅಕ್ಟೋಬರ್ 9 ಮತ್ತು 14ರಂದು ಎರಡು ಪಂದ್ಯಗಳನ್ನು ಆಡಬೇಕಾಗಿದೆ.

‘ರಾಷ್ಟ್ರೀಯ ತಂಡವನ್ನು ಕೋಚ್ ಆಗಿ ಮುನ್ನಡೆಸುವ ಹೊಣೆ ವಹಿಸಿರುವುದು ತಮಗೆ ಹೆಮ್ಮೆ ಮತ್ತು ಸಂತಸ ತಂದಿದೆ’ ಎಂದು 48 ವರ್ಷ ವಯಸ್ಸಿನ ಜಮೀಲ್ ಪ್ರತಿಕ್ರಿಯಿಸಿದರು.

ಸ್ಪೇನ್ನ ಮನೊಲೊ ಮಾರ್ಕ್ವೆಝ್ ಅವರು ಎಐಎಫ್ಎಫ್ ಒತೆ ಒಪ್ಪಂದವನ್ನು ಹೋದ ತಿಂಗಳು ಸಮ್ಮತಿಯೊಡನೆ ಕೊನೆಗೊಳಿಸಿದ ನಂತರ ಕೋಚ್ ಹುದ್ದೆ ತೆರವಾಗಿತ್ತು.

ಅವರು 2012ರ ನಂತರ ಸೀನಿಯರ್ ತಂಡಕ್ಕೆ ಕೋಚ್ ಆದ ಮೊದಲ ಭಾರತೀಯ ಎನಿಸಿದ್ದಾರೆ ಜಮೀಲ್. ಆ ವರ್ಷ ಭಾರತದವರೇ ಆದ ಸಾವಿಯೊ ಮೆಡೀರಾ ಕೋಚ್ ಆಗಿದ್ದರು.

ಐಎಸ್ಎಲ್ನಲ್ಲಿ ಅವರು ಕೋಚ್ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜಮ್ಷೆಡ್ಪುರ, ನಾರ್ತ್ಈಸ್ಟ್ ಯುನೈಟೆಡ್, ಐಜ್ವಾಲ್ ಎಫ್ಸಿ, ಈಸ್ಟ್ ಬೆಂಗಾಲ್, ಮೋಹನ್ ಬಾಗನ್ ಮತ್ತು ಮುಂಬೈ ಎಫ್ಸಿ ಅಂಥ ಘಟಾನುಘಟಿ ತಂಡಗಳಿಗೆ ಅವರು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

ಅದರಲ್ಲೂ 2016–17ನೇ ಸಾಲಿನಲ್ಲಿ ಅವರು ತರಬೇತುದಾರರಾಗಿದ್ದಾಗ ಐಜ್ವಾಲ್ ಎಫ್ಸಿ ಐಲೀಗ್ ಪ್ರಶಸ್ತಿ ಗೆದ್ದಿದ್ದು ಗಮನಸೆಳೆದಿತ್ತು. ಈ ವರ್ಷ ಅವರ ತರಬೇತಿಯಡಿ ಜಮ್ಷೆಡ್ಪುರ ತಂಡ ಸೂಪರ್ ಕಪ್ ಫೈನಲ್ ತಲುಪಿತ್ತು.

ಮಿಡ್ಫೀಲ್ಡರ್ ಆಗಿ ಜಮೀಲ್ ಭಾರತ ತಂಡದ ಪರ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸಂತೋಷ್ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.