ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಮಹಿಳಾ ಫುಟ್‌ಬಾಲ್‌ ಲೀಗ್‌

Last Updated 3 ಮೇ 2019, 20:00 IST
ಅಕ್ಷರ ಗಾತ್ರ

ಲುಧಿಯಾನ: ಮಹಿಳಾ ಫುಟ್‌ಬಾಲ್‌ ಲೀಗ್‌ನ ಮೂರನೇ ಆವೃತ್ತಿಗೆ ಭಾನುವಾರ ಇಲ್ಲಿ ಚಾಲನೆ ಸಿಗಲಿದೆ.

ಹಾಲಿ ಚಾಂಪಿಯನ್‌ ರೈಸಿಂಗ್‌ ಸ್ಟೂಡೆಂಟ್ಸ್‌ ಕ್ಲಬ್‌ ಮತ್ತು ಗೋಕುಲಮ್‌ ಕೇರಳ ಎಫ್‌ಸಿ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಲೀಗ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ.

ಮೊದಲನೇ ಗುಂಪಿನಲ್ಲಿ ರೈಸಿಂಗ್‌ ಸ್ಟೂಡೆಂಟ್ಸ್‌, ಗೋಕುಲಮ್‌, ಎಫ್‌ಸಿ ಅಲಕಪುರ, ಹಾನ್ಸ್‌ ಫುಟ್‌ಬಾಲ್‌ ಕ್ಲಬ್‌, ಸೆಂಟ್ರಲ್‌ ಎಸ್‌ಎಸ್‌ಬಿ ಫುಟ್‌ಬಾಲ್ ಕ್ಲಬ್‌ ಮತ್ತು ಪಂಜಿಮ್‌ ಫುಟ್‌ಬಾಲರ್ಸ್‌ ತಂಡಗಳು ಸ್ಥಾನ ಹೊಂದಿವೆ.

ಮಣಿಪುರ ಪೊಲೀಸ್‌, ಸೇತು ಎಫ್‌ಸಿ, ಬೆಂಗಳೂರು ಯುನೈಟೆಡ್‌ ಎಫ್‌ಸಿ, ಸಾಯ್‌–ಎಸ್‌ಟಿಸಿ ಕಟಕ್‌, ಎಫ್‌ಸಿ ಕೊಲ್ಹಾಪುರ ಸಿಟಿ ಮತ್ತು ಬರೋಡಾ ಫುಟ್‌ಬಾಲ್‌ ಅಕಾಡೆಮಿ ತಂಡಗಳು ಎರಡನೇ ಗುಂ‍ಪಿನಲ್ಲಿವೆ.

‘ಭಾರತ ಮಹಿಳಾ ತಂಡವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಮಹಿಳಾ ಲೀಗ್‌ ನೆರವಾಗಿದೆ. ಈ ಲೀಗ್‌ನಿಂದ ಹೊಸ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿರುವುದು ಖುಷಿಯ ವಿಷಯ. ಲೀಗ್‌ನಲ್ಲಿ ಆಡುತ್ತಿರುವ ಎಲ್ಲಾ ತಂಡಗಳಿಗೂ ಶುಭವಾಗಲಿ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್ಎಫ್‌) ಮಹಾಕಾರ್ಯದರ್ಶಿ ಕುಶಾಲ್‌ ದಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT