ಸೋಮವಾರ, ಜನವರಿ 18, 2021
22 °C

ಭಾರತ ಮಹಿಳಾ ಫುಟ್‌ಬಾಲ್ ತಂಡದ ಅಭ್ಯಾಸ ಇಂದಿನಿಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್ ತಂಡದ ಆಟಗಾರ್ತಿಯರು ಒಂಬತ್ತು ತಿಂಗಳ ನಂತರ ಮಂಗಳವಾರ ಮೊದಲ ಬಾರಿ ಅಭ್ಯಾಸ ಕಣಕ್ಕೆ ಇಳಿಯಲಿದ್ದಾರೆ. ಗೋವಾದಲ್ಲಿ ಸಜ್ಜುಗೊಳಿಸಲಾಗಿರುವ ಬಯೊಸೆಕ್ಯೂರ್ ವ್ಯವಸ್ಥೆಯ ಒಳಗೆ ಕೋಚ್‌ ಮೈಮೋಳ್ ರಾಕಿ ಅವರ ಬಳಿ ತರಬೇತಿ ಪಡೆಯಲಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಸೋಮವಾರ ತಿಳಿಸಿದೆ. 

ತಂಡದ ವೈದ್ಯ ಶೆರ್ವೀನ್ ಷರೀಫ್ ಅವರು ಎಸ್‌ಒಪಿ ಸಿದ್ಧಪಡಿಸಿಕೊಟ್ಟಿದ್ದು ಕೋವಿಡ್‌–19ಕ್ಕೆ ಸಂಬಂಧಪಟ್ಟು ಕೈಗೊಳ್ಳಬೇಕಾದ ಎಲ್ಲ ಮಾರ್ಗಸೂಚಿಗಳು ಅದರಲ್ಲಿ ಅಡಕವಾಗಿವೆ. ಇದನ್ನು ಪಾಲಿಸಿಕೊಂಡೇ ತರಬೇತಿಯಲ್ಲಿ ಪಾಲ್ಗೊಳ್ಳಲು ಆಟಗಾರ್ತಿಯರು ಕಾತರರಾಗಿದ್ದು 2022ರ ಎಎಫ್‌ಸಿ ಏಷ್ಯಾಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಈ ತರಬೇತಿ ಅನುಕೂಲ ಆಗಲಿದೆ ಎಂದು ರಾಕಿ ಹೇಳಿದ್ದಾರೆ.

’ಭಾರತ ತಂಡಕ್ಕೆ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸ್ಪರ್ಧಿಸಿದ ಅನುಭವ ಇದೆ ನಿಜ. ಆದರೆ ಎಎಫ್‌ಸಿ ಮಹಿಳಾ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಒಂದು ರೋಚಕ ಅನುಭವ. ಆದ್ದರಿಂದ ಆ ಟೂರ್ನಿಯಲ್ಲಿ ಆಡಲು ಆಟಗಾರ್ತಿಯರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಸಿದ್ಧತೆಗೆ ಒಂದು ವರ್ಷದ ಅವಧಿ ಇದ್ದರೂ ಆ ಟೂರ್ನಿಯ ಗುಣಮಟ್ಟದ ದೃಷ್ಟಿಯಲ್ಲಿ ಈ ಅವಧಿಯೂ ಕಡಿಮೆಯೇ’ ಎಂದು ಅವರು ಅಭಿಪ್ರಾಯಪಟ್ಟರು. 

ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಮನೆಯಿಂದ ಹೊರಡುವ ಮೂರು ದಿನಗಳ ಹಿಂದೆ ಮಾಡಿಸಿದ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಆಟಗಾರ್ತಿಯರು ಮತ್ತು ಸಿಬ್ಬಂದಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು. ಗೋವಾ ತಲುಪಿದ ನಂತರ ರ‍್ಯಾ‍ಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ ನೆಗೆಟಿವ್ ಬಂದವರಿಗೆ ಮಾತ್ರ ಹೋಟೆಲ್ ಕೊಠಡಿಯೊಳಗೆ ಹೋಗಲು ಅವಕಾಶ ನೀಡಲಾಗಿತ್ತು. ನಂತರ ಏಳು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗಿತ್ತು. ಎಂಟನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾದ ನಂತರ ತರಬೇತಿಗೆ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು