ಜೆಮ್ಶೆಡ್ಪುರ್: ಅನಿಕೇತ್ ಜಾಧವ್ ಮತ್ತು ಸರ್ಗಿಯೊ ಕ್ಯಾಸ್ಟಲ್ ಅವರು ಹೊಡೆದ ಗೋಲುಗಳ ಬಲದಿಂದ ಜೆಮ್ಶೆಡ್ಪುರ್ ಫುಟ್ಬಾಲ್ ಕ್ಲಬ್ (ಜೆಎಫ್ಸಿ) ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಜಯಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಜೆಎಫ್ಸಿಯು 3–1ರಿಂದ ಹೈದರಾಬಾದ್ ಫುಟ್ಬಾಲ್ ಕ್ಲಬ್ (ಎಚ್ಎಫ್ಸಿ) ಎದುರು ಗೆದ್ದಿತು.

ಪಂದ್ಯದ 34ನೇ ನಿಮಿಷದಲ್ಲಿ ಜೆಎಫ್ಸಿಯ ಮಿಡ್ಫೀಲ್ಡರ್ ಫಾರೂಕ್ ಚೌಧರಿ ಕಾಲ್ಚಳಕ ಮೆರೆದರು. ಗೋಲ್ಕೀಪರ್ ಕಣ್ತಪ್ಪಿಸಿದ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಇದರಿಂದಾಗಿ ತಂಡವು 1–0 ಮುನ್ನಡೆ ಸಾಧಿಸಿದರು. ಆದರೆ, ಹತ್ತು ನಿಮಿಷಗಳವರೆಗೆ ಮಾತ್ರ ಈ ಸಂಭ್ರಮ ಇತ್ತು.ಹೈದರಾಬಾದ್ ತಂಡದ ಮಿಡ್ಫೀಲ್ಡರ್ ಮಾರ್ಸಿಲಿನಪೊ ಲೀಟ್ ಪೆರೇರಾ (45+1ನಿ)ಅವರು ಆರ್. ಕುಮಾರ್ ಅವರು ಕೊಟ್ಟ ಪಾಸ್ ಪಡೆದು ಗೋಲು ಗಳಿಸುವಲ್ಲಿ ಸಫಲರಾದರು. ಇದರ ನಂತರದ 17 ನಿಮಿಷಗಳಲ್ಲಿ ತುರುಸಿನ ಹೋರಾಟ ನಡೆಯಿತು. 62ನೇ ನಿಮಿಷದಲ್ಲಿ ಹೈದರಾಬಾದ್ ತಂಡದ ರಕ್ಷಣಾ ಕೊಟೆಯನ್ನು ದಾಟಿದ ಜೆಎಫ್ಸಿಯ ಅನಿಕೇತ್ ಜಾಧವ್ ಗೋಲು ಗಳಿಸುವಲ್ಲಿ ಸಫಲರಾದರು. 75ನೇ ನಿಮಿಷದಲ್ಲಿ ಸರ್ಗಿಯೊ ಕ್ಯಾಸ್ಟಲ್ ಕೂಡ ಒಂದು ಗೋಲು ಹೊಡೆದು ತಂಡದ ಗೆಲುವು ಖಚಿತಪಡಿಸಿದರು.

ಬುಧವಾರದ ಪಂದ್ಯ

ಚೆನ್ನೈಯಿನ್ ಎಫ್ಸಿ–ಎಟಿಕೆ

ಆರಂಭ: ಸಂಜೆ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.