ಬುಧವಾರ, ನವೆಂಬರ್ 13, 2019
22 °C
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ

ಎಟಿಕೆಗೆ ಜಯ–ಜೆಎಫ್‌ಸಿಗೆ ಮೊದಲ ಸೋಲು

Published:
Updated:

ಕೋಲ್ಕತ್ತ: ರಾಯ್‌ ಕೃಷ್ಣ ಅವರ ಉತ್ತಮ ಆಟದ ನೆರವಿನಿಂದ ಆತಿಥೇಯ ಎಟಿಕೆ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಶನಿವಾರ 3–1 ಗೋಲುಗಳಿಂದ ಜೆಮ್‌ಶೆಡ್‌ಪುರ ಎಫ್‌.ಸಿ. (ಜೆಎಫ್‌ಸಿ) ತಂಡವನ್ನು ಸೋಲಿಸಿತು. ಜೆಎಫ್‌ಸಿಗೆ ಇದು ನಾಲ್ಕು ಪಂದ್ಯಗಳಲ್ಲಿ ಮೊದಲ ಸೋಲು

ಯುವಭಾರತಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ನಾಲ್ಕೂ ಗೋಲುಗಳು ವಿರಾಮದ ನಂತರ ಬಂದವು. ರಾಯ್‌ 57 ಮತ್ತು 71ನೇ ನಿಮಿಷ ಗೋಲುಗಳನ್ನು ಗಳಿಸಿದರೆ, ಜೆಎಫ್‌ಸಿ ಪರ ಸೆರ್ಗಿಯೊ ಕ್ಯಾಸೆಲ್‌ 85ನೇ ನಿಮಿಷ ಅಂತರ ಕಡಿಮೆ ಮಾಡಿದರು. ಇಂಜುರಿ ಟೈಮ್‌ನಲ್ಲಿ (90+4) ಎಡು ಗಾರ್ಸಿಯಾ ಎಟಿಕೆ ಗೆಲುವಿನ ಅಂತರ ಹೆಚ್ಚಿಸಿದರು.

ಪ್ರತಿಕ್ರಿಯಿಸಿ (+)