ಶನಿವಾರ, ಆಗಸ್ಟ್ 13, 2022
26 °C

ಐಎಸ್‌ಎಲ್‌: ಗೋವಾ–ಒಡಿಶಾ ಹಣಾಹಣಿ ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಕಳೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 3–1 ಗೋಲುಗಳಿಂದ ಜಯ ಸಾಧಿಸಿರುವ ಗೋವಾ ತಂಡ ಆತ್ಮವಿಶ್ವಾಸದಲ್ಲಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲೂ ಗೆಲುವು ಸಾಧಿಸದ ಒಡಿಶಾ ತಂಡ ನಿರಾಸೆಯನ್ನು ಮರೆಯುವ ಹಂಬಲದಲ್ಲಿದೆ.

ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿರುವ ಫಾರ್ವರ್ಡ್ ಆಟಗಾರ ಇಗೊರ್‌ ಅಂಗುಲೊ, ಜಾರ್ಜ್‌ ಆರ್ಟಿಜ್ ಮೆಂಡೋಜಾ, ಬ್ರೆಂಡನ್ ಫರ್ನಾಂಡೀಸ್‌ ಹಾಗೂ ಎಡು ಬೇಡಿಯಾ ಗೋವಾ ತಂಡದ ಶಕ್ತಿಯಾಗಿದ್ದಾರೆ.

ಕೋಚ್‌ ಸ್ಟುವರ್ಟ್‌ ಬ್ಯಾಕ್ಸಟರ್‌ ನೇತೃತ್ವದ ಒಡಿಶಾ ತಂಡವು ಆಕ್ರಮಣ ಹಾಗೂ ಡಿಫೆನ್ಸ್ ಎರಡೂ ವಿಭಾಗಗಳಲ್ಲೂ ಮೊನಚು ಕಳೆದುಕೊಂಡಿದೆ. ಟೂರ್ನಿಯ ಮೂರು ಪಂದ್ಯಗಳಲ್ಲಿ ಆ ತಂಡಕ್ಕೆ ಒಂದು ಗೋಲೂ ಗಳಿಸಲಾಗಿರಲಿಲ್ಲ.

ಹೋದ ಆವೃತ್ತಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಎರಡೂ ಪಂದ್ಯಗಳಲ್ಲಿ ಗೋವಾ ಗೆಲುವಿನ ನಗೆ ಬೀರಿತ್ತು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸುವ ತವಕದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.