ಸೋಮವಾರ, ಜುಲೈ 4, 2022
21 °C

ಗೋವಾ-ಡೈನಾಮೊಸ್‌ ಸಮಬಲದ ಆಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಲಿಷ್ಠ ಎಫ್‌ಸಿ ಗೋವಾ ತಂಡವನ್ನು ಕಟ್ಟಿ ಹಾಕಿದ ಡೆಲ್ಲಿ ಡೈನಾಮೊಸ್‌ ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಡ್ರಾ ಸಾಧಿಸಿತು.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಆರಂಭದಿಂದಲೇ ಜಿದ್ದಾಜಿದ್ದಿಯಿಂದ ಕಾದಾಡಿದವು. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಗೋವಾ ತಂಡಕ್ಕೆ ಪ್ಲೇ ಆಫ್ ಹಂತದಲ್ಲಿ ಸ್ಥಾನ ಗಟ್ಟಿಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅನಿವಾರ್ಯವಾಗಿತ್ತು.

ಎಂಟನೇ ಸ್ಥಾನದಲ್ಲಿರುವ ಡೈನಾಮೊಸ್‌ ಪ್ಲೇ ಆಫ್ ಹಂತದ ಆಸೆಯನ್ನು ಈಗಾಗಲೇ ಕೈಬಿಟ್ಟಿದೆ. ಆದರೂ ಜಯ ಗಳಿಸಲು ಕಠಿಣ ಪ್ರಯತ್ನ ನಡೆಸಿತು. ಉಭಯ ತಂಡಗಳಿಗೆ ಸಾಕಷ್ಟು ಅವಕಾಶಗಳು ದೊರಕಿದರೂ ಗುರಿ ಮುಟ್ಟಲು ಆಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು