ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪುಣೆಗೆ ಜಯ

7

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪುಣೆಗೆ ಜಯ

Published:
Updated:
Deccan Herald

ಕೊಚ್ಚಿ: ಆತಿಥೇಯ ತಂಡ ವನ್ನು ದಂಗುಬಡಿಸಿದ ಪುಣೆ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ 1–0ಯಿಂದ ಜಯ ಗಳಿಸಿತು.

ಇಲ್ಲಿನ ಜವಾಹರಲಾಲ್ ಕ್ರೀಡಾಂಗ ಣದಲ್ಲಿ ನಡೆದ ಕೇರಳ ಬ್ಲಾಸ್ಟರ್ಸ್‌ ಎದುರಿನ ಪಂದ್ಯದ 20ನೇ ನಿಮಿಷದಲ್ಲಿ ಮಾರ್ಸೆಲೊ ಪೆರೇರ ಅವರು ಪುಣೆ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಸಮಬಲ ಸಾಧಿಸಲು ಬ್ಲಾಸ್ಟರ್ಸ್‌ ನಡೆಸಿದ ಪ್ರಯತ್ನಗಳನ್ನು ಪುಣೆ ತಂಡದ ರಕ್ಷಣಾ ವಿಭಾಗದವರು ವಿಫಲಗೊಳಿಸಿದರು.

ಯುನೈಟೆಡ್‌–ಎಟಿಕೆ ಮುಖಾ ಮುಖಿ: ಗುವಾಹಟಿಯಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಎಟಿಕೆಯನ್ನು ಎದುರಿಸಲಿದೆ.

ಕಳೆದ ನಾಲ್ಕು ಪಂದ್ಯಗಳ ಪೈಕಿ ಮೊದಲ ಎರಡರಲ್ಲಿ ಗೆದ್ದು ನಂತರ ಎರಡನ್ನು ಡ್ರಾ ಮಾಡಿಕೊಂಡಿರುವ ನಾರ್ತ್
ಈಸ್ಟ್ ಯುನೈಟೆಡ್‌ ಪಾಯಿಂಟ್‌ ಪಟ್ಟಿ ಯಲ್ಲಿ ಮೂರನೇ ಸ್ಥಾನ ಉಳಿಸಿಕೊಳ್ಳುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಎಟಿಕೆಯೂ ಕಳೆದ ನಾಲ್ಕು ಪಂದ್ಯಗಳ ಪೈಕಿ ಎರಡನ್ನು ಗೆದ್ದಿದ್ದು ಎರಡರಲ್ಲಿ ಡ್ರಾ ಸಾಧಿಸಿದೆ. ಆರನೇ ಸ್ಥಾನದಲ್ಲಿರುವ ತಂಡ ಅಗ್ರ ಐದರಲ್ಲಿ ಸ್ಥಾನ ಗಳಿಸುವತ್ತ ಚಿತ್ತ ನೆಟ್ಟಿದೆ. ಆದ್ದರಿಂದ ಪಂದ್ಯ ರೋಚಕವಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !