ಐಎಸ್‌ಎಲ್‌: ಪುಣೆ ಎಫ್‌ಸಿಗೆ ಮಣಿದ ಚೆನ್ನೈಯಿನ್‌

7

ಐಎಸ್‌ಎಲ್‌: ಪುಣೆ ಎಫ್‌ಸಿಗೆ ಮಣಿದ ಚೆನ್ನೈಯಿನ್‌

Published:
Updated:
Prajavani

ಚೆನ್ನೈ: ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ಶನಿವಾರ ಮತ್ತೊಮ್ಮೆ ಆಘಾತಕ್ಕೆ ಒಳಗಾಯಿತು. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ತಂಡ ಪುಣೆ ಎಫ್‌ಸಿಗೆ 1–2ರಿಂದ ಮಣಿಯಿತು.

ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲದಿಂದ ಕಾದಾಡಿದವು. 55ನೇ ನಿಮಿಷದಲ್ಲಿ ಸಿ.ಕೆ.ವಿನೀತ್ ಗಳಿಸಿದ ಗೋಲಿನ ಮೂಲಕ ಚೆನ್ನೈಯಿನ್‌ ಮುನ್ನಡೆ ಗಳಿಸಿತು. ಆದರೆ ನಾಲ್ಕೇ ನಿಮಿಷಗಳಲ್ಲಿ ಪುಣೆ ತಿರುಗೇಟು ನೀಡಿತು.

ಮಾರ್ಸೆಲೊ ಪೆರೇರ ಚೆಂಡನ್ನು ಗುರಿ ಮುಟ್ಟಿಸಿದರು. 60ನೇ ನಿಮಿಷದಲ್ಲಿ ಮಾರ್ಸೆಲೋ ಗಳಿಸಿದ ಮತ್ತೊಂದು ಗೋಲು ಪುಣೆ ತಂಡದ ಗೆಲುವಿಗೆ ಕಾರಣವಾಯಿತು.

ಇಂದು ಎಟಿಕೆ–ಜೆಎಫ್‌ಸಿ ಹಣಾಹಣಿ: ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಎಟಿಕೆ ತಂಡ ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಎದುರು ಸೆಣಸಲಿದೆ.

ಪ್ಲೇ ಆಫ್‌ ಹಂತಕ್ಕೇರುವ ಕನಸು ನನಸನ್ನು ಜೀವಂತವಾಗಿ ಇರಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !