ಶನಿವಾರ, ಫೆಬ್ರವರಿ 22, 2020
19 °C

ಐಎಸ್‌ಎಲ್‌: ಮುಂಬೈ –ಎನ್‌ಇಯು ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಪಿಟಿಐ): ಮೊದಲಾರ್ಧದಲ್ಲಿ 4 ಗೋಲುಗಳು ಮೂಡಿ ಬಂದರೂ ಮುಂಬೈ ಮತ್ತು ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್‌ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ (2–2) ಮುಕ್ತಾಯಗೊಂಡಿತು.

ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ 25ನೇ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.

ಪನಾಜಿಯೊಟಿಸ್ ಟ್ರಿಯಾಡಿಸ್ 9ನೇ ನಿಮಿಷದಲ್ಲಿ ಮೋಹಕ ಗೋಲು ಗಳಿಸಿ ನಾರ್ತ್ ಈಸ್ಟ್‌ ಯುನೈಟೆಡ್‌ಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ಅಮೀನ್ ಚೆರ್ಮಿಟಿ 23 ಮತ್ತು 32ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮುಂಬೈ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

42ನೇ ನಿಮಿಷದಲ್ಲಿ ಅಸಮೊಹ್ ಗ್ಯಾನ್ ತಿರುಗೇಟು ನೀಡುವುದರೊಂದಿಗೆ ಫುಟ್‌ಬಾಲ್ ಪ್ರಿಯರ ಕುತೂಹಲ ಹೆಚ್ಚಿತು. ಆದರೆ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ. ನಾರ್ತ್ ಈಸ್ಟ್ ಯುನೈಟೆಡ್‌ 4ನೇ ಸ್ಥಾನದಲ್ಲೂ ಮುಂಬೈ ಸಿಟಿ 7ನೇ ಸ್ಥಾನದಲ್ಲೂ ಉಳಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು