ನವದೆಹಲಿ: ಪಂಜಾಬ್ ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿತು.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 2–1 ಗೋಲುಗಳಿಂದ ಒಡಿಶಾ ಎಫ್‌ಸಿ ವಿರುದ್ಧ ಗೆದ್ದಿತು.
ಪಂಜಾಬ್ ತಂಡದ ನಿಹಲ್ ಸುದೀಶ್ (28ನೇ ನಿಮಿಷ) ಮತ್ತು ಲಿಯೊ ಆಗಸ್ಟಿನ್ (89 ನೇ ನಿ) ಅವರು ತಲಾ ಒಂದು ಗೋಲು ಗಳಿಸಿದರು. ಒಡಿಶಾ ತಂಡಕ್ಕೆ ರವಿಕುಮಾರ್ (90+6ನಿ) ಗೋಲು ಉಡುಗೊರೆ ನೀಡಿದರು. ಇದರಿಂದಾಗಿ ಗೋಲು ವ್ಯತ್ಯಾಸ ಕಡಿಮೆಯಾಯಿತು.
ಆರು ಅಂಕ ಗಳಿಸಿರುವ ಪಂಜಾಬ್ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ತಂಡವು ಇಷ್ಠೇ ಅಂಕ ಗಳಿಸಿದ್ದು ಗೋಲು ವ್ಯತ್ಯಾಸದಲ್ಲಿ ಮುಂದಿರುವ ಕಾರಣ ಮೊದಲ ಸ್ಥಾನದಲ್ಲಿದೆ.