ಶನಿವಾರ, ಮೇ 28, 2022
31 °C
ಕೆಎಸ್‌ಎಫ್‌ಎ ಸಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌

ಶಾಶ್ವತ್, ವಿಶಾಲ್ ಮಿಂಚು: ರೂಟ್ಸ್‌ಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ಆರ್‌. ಶಾಶ್ವತ್‌ (ಐದು ಗೋಲು) ಹಾಗೂ ವಿಶಾಲ್ ಆರ್‌. (ನಾಲ್ಕು ಗೋಲು) ಅವರ ಆಟದ ಬಲದಿಂದ ರೂಟ್ಸ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಸಿ ಡಿವಿಷನ್‌ ಲೀಗ್‌ ಫುಟ್‌ಬಾಲ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಶನಿವಾರ ನಡೆದ ಉತ್ತರವಲಯ ಎಂ. ಗುಂಪಿನ ಪಂದ್ಯದಲ್ಲಿ ರೂಟ್ಸ್ 21–0ರಿಂದ ಜಯರಾಜ್‌ ಎಫ್‌ಸಿ ವಿರುದ್ಧ ಗೆದ್ದಿತು. ಶಾಶ್ವತ್‌ 12, 29, 46, 51 ಮತ್ತು 60ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರೆ, ವಿಶಾಲ್‌ 15, 26, 31, 54ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಕೆ. ಮದನ್‌ಕುಮಾರ್‌ (37, 47 ಮತ್ತು 56ನೇ ನಿ.) ತಂಡದ ಪರ ಹ್ಯಾಟ್ರಿಕ್ ಗಳಿಸಿದರು.

ಇನ್ನುಳಿದ ಪಂದ್ಯಗಳಲ್ಲಿ ಬ್ಲ್ಯಾಕ್ ಮೂನ್‌ 5–1ರಿಂದ ಸಾರಾ ಎದುರು, ಯಲಹಂಕ ಕ್ಯಾಂಪ್ ಬಾಯ್ಸ್ 2–1ರಿಂದ ಪಾಸ್‌ ಎಫ್‌ಸಿ ವಿರುದ್ಧ ಜಯಿಸಿತು.

ಒ ಗುಂಪಿನ ಹಣಾಹಣಿಗಳಲ್ಲಿ ಬಿಜಿಎಫ್‌ ಸ್ಪೋರ್ಟಿಂಗ್‌ 3–0ಯಿಂದ ಸಾಯಿ ಸ್ಪೋರ್ಟ್ಸ್ ಅಕಾಡೆಮಿ ಎದುರು, ಹಾಕ್ಸ್ ಯುಬೈಟೆಡ್ ಎಸ್‌ಎ 5–0ಯಿಂದ ಗೋಪಾಲನ್ ಎಫ್‌ಸಿ ವಿರುದ್ಧ, ಫುಟ್‌ಬಾಲ್ ಅಕಾಡೆಮಿ ಆಫ್ ಬೆಂಗಳೂರು 5–0ಯಿಂದ ಬ್ರೇಕ್‌ವೇ ಎಫ್‌ಸಿ ವಿರುದ್ಧ ಜಯ ಸಾಧಿಸಿದವು. 

ದಕ್ಷಿಣ ವಲಯ ಇ ಗುಂಪಿನ ಪಂದ್ಯಗಳಲ್ಲಿ ಬಿಎಫ್‌ಸಿ ಜೂನಿಯರ್‌ 8–0ಯಿಂದ ಶುಭೋದಯ ಎಫ್‌ಸಿ ವಿರುದ್ಧ ಜಯ ಸಾಧಿಸಿತು. ವಿಜೇತ ತಂಡದ ಲಾಲ್‌ಪೆಕ್ಲುಲಾ ಅಮೋಘ ಐದು ಗೋಲು ಹೊಡೆದರು. ಪಯೋನಿಯರ್ಸ್‌ ಎಫ್‌ಸಿ 8–1ರಿಂದ ಯುನೈಟೆಡ್‌ ರಾಜರಾಜೇಶ್ವರಿ ಎದುರು ಗೆದ್ದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.