ಬೆಂಗಳೂರು: ಎನ್. ರಾಕೇಶ್ ಸಿಂಗ್ (36ನೇ ನಿ., 59ನೇ ನಿ. ಹಾಗೂ 75ನೇ ನಿ.) ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕಿಕ್ಸ್ಟಾರ್ಟ್ ಫುಟ್ಬಾಲ್ ಕ್ಲಬ್ ತಂಡವು ಕೆಎಸ್ಎಫ್ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಶುಕ್ರವಾರ 7–0ಯಿಂದ ಭಾರತ್ ಬೆಂಗಳೂರು ತಂಡವನ್ನು ನಿರಾಯಾಸವಾಗಿ ಮಣಿಸಿತು. ಈ ಗೆಲುವಿನ ಮೂಲಕ 35 ಪಾಯಿಂಟ್ಸ್ಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಕ್ಸ್ಟಾರ್ಟ್ ತಂಡದ ಆಟಗಾರರು ಪಂದ್ಯದುದ್ದಕ್ಕೂ ಪಾರಮ್ಯ ಮೆರೆದರು. ಮೋನಿಷ್ (3ನೇ ನಿ.) ಆರಂಭಿಕ ಮುನ್ನಡೆ ತಂದಿತ್ತರೆ, ಎದುರಾಳಿ ತಂಡದ ಸಿಲ್ವರ್ ರಾಕ್ಸ್ 4ನೇ ನಿಮಿಷದಲ್ಲಿ ಉಡುಗೊರೆ ಗೋಲು ಹೊಡೆದರು. ರಾಕೇಶ್ ಹ್ಯಾಟ್ರಿಕ್ ಗೋಲಿನೊಂದಿಗೆ ಮಿಂಚಿದರು. ಪ್ರೇಮಿಷ್ ಟಿ.(56ನೇ ನಿ.) ಹಾಗೂ ಅಮೋಘವರ್ಷ ಜಿ.(75ನೇ ನಿ.) ಗೆಲುವಿನ ಅಂತರವನ್ನು ಹಿಗ್ಗಿಸಿದರು.

ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಸಿಟಿ ಎಫ್ಸಿ ತಂಡವು 1–0ಯಿಂದ ಎಂಎಫ್ಎಆರ್ ಸ್ಟುಡೆಂಟ್ಸ್ ಯೂನಿಯನ್ ತಂಡವನ್ನು ಸೋಲಿಸಿತು. ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು–ಎಫ್ಸಿ ರಿಯಲ್ ಬೆಂಗಳೂರು ನಡುವಣ ಪಂದ್ಯ 1–1 ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.