ಭಾನುವಾರ, ಜುಲೈ 3, 2022
27 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

ಕೇರಳ ಬ್ಲಾಸ್ಟರ್ಸ್‌ಗೆ ಜೆಮ್ಶೆಡ್‌ಪುರ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಜಯದ ಹುಡುಕಾಟದಲ್ಲಿರುವ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಹಾಗೂ ಜೆಮ್ಶೆಡ್‌ಪುರ ಎಫ್‌ಸಿ ತಂಡಗಳು ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಮುಖಾಮುಖಿಯಾಗಲಿವೆ. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಿಸಿ ಟೂರ್ನಿಯಲ್ಲಿ ಮುನ್ನಡೆಯುವುದು ಉಭಯ ತಂಡಗಳ ಹಂಬಲವಾಗಿದೆ.

ಇದುವರೆಗೆ 13 ಪಂದ್ಯಗಳನ್ನು ಆಡಿರುವ ಉಭಯ ತಂಡಗಳು ತಲಾ 14 ಪಾಯಿಂಟ್ಸ್ ಕಲೆಹಾಕಿವೆ. ಪಟ್ಟಿಯಲ್ಲಿ ಜೆಮ್ಶೆಡ್‌ಪುರ 8ನೇ ಸ್ಥಾನದಲ್ಲಿದ್ದರೆ, ಕೇರಳ ಅದಕ್ಕಿಂತ ಒಂದು ಸ್ಥಾನ ಹಿಂದೆ ಇದೆ. ಉಭಯ ತಂಡಗಳಿಗೆ ಒಂದೊಂದು ರೀತಿಯ ದೌರ್ಬಲ್ಯಗಳಿವೆ.

ಕೇರಳ ಬ್ಲಾಸ್ಟರ್ಸ್‌ ಈ ಬಾರಿ ಟೂರ್ನಿಯಲ್ಲೇ ಅತಿ ಹೆಚ್ಚು (22) ಗೋಲುಗಳನ್ನು ಎದುರಾಳಿದ ನೀಡಿದ ತಂಡವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೆಮ್ಶೆಡ್‌ಪುರ ತಂಡವು ಗೋಲು ಗಳಿಸುವ ವಿಷಯದಲ್ಲಿ ಪರಿಣಾಮಕಾರಿಯಾಗಿಲ್ಲ. ಇಲ್ಲಿಯವರೆಗೆ ಅದು ಕೇವಲ 13 ಗೋಲು ದಾಖಲಿಸಿದೆ.

‘ನಾವು ಇದುವರೆಗೆ ಎರಡು ಕ್ಲೀನ್ ಶೀಟ್‌ಗಳನ್ನು ಸಾಧಿಸಿದ್ದೇವೆ. ಈ ವಿಭಾಗದಲ್ಲಿ ಇನ್ನಷ್ಟು ಸುಧಾರಣೆ ಕಾಣುವ ವಿಶ್ವಾಸವಿದೆ. ಟೂರ್ನಿಯ ಮೊದಲಾರ್ಧದಲ್ಲಿ ನಾವು ಪರಿಣಾಮಕಾರಿ ಆಟವಾಡಲು ಸಾಧ್ಯವಾಗಿಲ್ಲ. ನಿರ್ಣಾಯಕ ಸಂದರ್ಭದ ಪಂದ್ಯಗಳಲ್ಲಿ ನಮ್ಮ ಆಟಗಾರರು ಗಾಯದ ಕಾರಣ ಕಣಕ್ಕಿಳಿಯಲು ಸಾಧ್ಯವಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ‘ ಎಂದು ಕೇರಳ ಬ್ಲಾಸ್ಟರ್ಸ್‌ ಸಹಾಯಕ ಕೋಚ್‌ ಇಶ್ಫಾಕ್ ಅಹಮ್ಮದ್‌ ಹೇಳಿದ್ದಾರೆ.

ಕಳೆದ ಪಂದ್ಯದಲ್ಲಿ ಹೈದರಬಾದ್ ಎಫ್‌ಸಿ ಎದುರು ಗೋಲುರಹಿತ ಡ್ರಾ ಸಾಧಿಸಿರುವ, ಓವೆನ್ ಕೊಯ್ಲೆ ತರಬೇತಿಯಲ್ಲಿ ಪಳಗಿರುವ ಜೆಮ್ಶೆಡ್‌ಪುರ ಈ ಪಂದ್ಯದಲ್ಲಿ ಜಯದ ನಿರೀಕ್ಷೆ ಇಟ್ಟುಕೊಂಡಿದೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ ಬ್ಯಾಂಬೊಲಿಮ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು