ಲಿವರ್ಪೂಲ್: ದ್ವಿತೀಯಾರ್ಧದ ಎರಡು ಗೋಲುಗಳ ಬಲದಿಂದ ಅಮೋಘ ಜಯ ಸಾಧಿಸಿದ ಲಿವರ್ಪೂಲ್ ತಂಡ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ನತ್ತ ದಾಪುಗಾಲು ಹಾಕಿದೆ. ಆ್ಯನ್ಫೀಲ್ಡ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಲೆಗ್ ಸೆಮಿಫೈನಲ್ನ ಎರಡನೇ ಪಂದ್ಯದಲ್ಲಿ ಲಿವರ್ಪೂಲ್ 2–0ಯಿಂದ ವಿಲಾರಿಯಲ್ ವಿರುದ್ಧ ಜಯ ಗಳಿಸಿತು.

ಬುಧವಾರ ನಡೆದ ಮೊದಲ ಲೆಗ್ನ ಮೊದಲ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ರಿಯಲ್ ಮ್ಯಾಡ್ರಿಡ್ ವಿರುದ್ಧ 4–3ರಲ್ಲಿ ಗೆಲುವು ಸಾಧಿಸಿತ್ತು. ಈ ತಂಡಗಳ ನಡುವಿನ ಎರಡನೇ ಲೆಗ್ನ ಎರಡನೇ ಪಂದ್ಯ ಮೇ 5ರಂದು ನಡೆಯಲಿದೆ. ಮೇ 4ರಂದು ಲಿವರ್ ಪೂಲ್ ಮತ್ತು ವಿಲಾರಿಯಲ್ ನಡುವೆ ಎರಡನೇ ಲೆಗ್ನ ಮೊದಲ ಪಂದ್ಯ ನಡೆಯಲಿದೆ. ಆ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೆ ಅಥವಾ ಒಂದು ಗೋಲಿನ ಅಂತರದಲ್ಲಿ ಸೋತರೂ ಲಿವರ್ಪೂಲ್ ಪ್ರಶಸ್ತಿ ಸುತ್ತು ಪ್ರವೇಶಿಸಲಿದೆ.

ಯುರೋಪಿಯನ್ ಚಾಂಪಿಯನ್ಷಿಪ್ಗಳಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದಿರುವ ಲಿವರ್ಪೂಲ್ಗೆ ವಿಲಾರಿಯಲ್ ತಂಡದಿಂದ ಭಾರಿ ಸವಾಲೇನೂ ಎದುರಾಗಲಿಲ್ಲ. ಮೊದಲಾರ್ಧದಲ್ಲಿ ಗೋಲು ಬಿಟ್ಟುಕೊಡದ ತಂಡ ದ್ವಿತೀಯಾರ್ಧದ ಆರಂಭದಲ್ಲೇ ಕೈಸುಟ್ಟುಕೊಂಡಿತು. ಆ ತಂಡದ ರಕ್ಷಣಾ ವಿಭಾಗದ ಪರ್ವಿಸ್ ಎಸ್ಟುಪಿನಾ ಮಾಡಿದ ಪ್ರಮಾದ ಲಿವರ್ಪೂಲ್ಗೆ ಮುನ್ನಡೆ ಗಳಿಸಿಕೊಟ್ಟಿತು.

53ನೇ ನಿಮಿಷದಲ್ಲಿ ಜೋರ್ಡನ್ ಹೆಂಡೆರ್ಸನ್ ಅವರ ಕ್ರಾಸ್ನಲ್ಲಿ ಚೆಂಡನ್ನು ಹೊರಗೆ ಅಟ್ಟಲು ಪ್ರಯತ್ನಿಸಿದ ಪರ್ವಿಸ್ ತಮ್ಮದೇ ತಂಡದ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಅಟ್ಟಿದರು. ಉಡುಗೊರೆಯಾಗಿ ಲಭಿಸಿದ ಮುನ್ನಡೆಯ ಲಾಭ ಪಡೆದ ತಂಡ 55ನೇ ನಿಮಿಷದಲ್ಲಿ ಸಡಿಯೊ ಮಾನೆ ಗೋಲು ಗಳಿಸಿ ಸಂಭ್ರಮಿಸಿದರು. ಮೊಹಮ್ಮದ್ ಸಲಾ ನೀಡಿದ ಪಾಸ್ನಲ್ಲಿ ಸಾಡಿಯೊ ಸುಲಭವಾಗಿ ಚೆಂಡನ್ನು ಗುರಿ ಮುಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.