ಬೆಂಗಳೂರು: ಎಚ್ಎಎಲ್ ಎಫ್ಸಿ ಮತ್ತು ಫ್ರೆಂಡ್ಸ್ ಯುನೈಟೆಡ್ ಎಫ್ಸಿ ತಂಡಗಳು ಬಿಡಿಎಫ್ಎ ಆಶ್ರಯದ ‘ಸಿ’ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬುಧವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಅಶೋಕನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಎಚ್ಎಎಲ್ 4–0 ಗೋಲುಗಳಿಂದ ಮೊಹಮ್ಮಡನ್ ಸ್ಪೋರ್ಟಿಂಗ್ ಎಫ್ಸಿ ಎದುರು ಗೆದ್ದಿತು.
ಎಚ್ಎಎಲ್ ತಂಡದ ಅಲೋಷಿಯಸ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಅವರು 15, 31 ಮತ್ತು 33ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪವಿತ್ರನ್ 20ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಫ್ರೆಂಡ್ಸ್ ಯುನೈಟೆಡ್ ಎಫ್ಸಿ 1–0 ಗೋಲಿನಿಂದ ರೆಬೆಲ್ಸ್ ಎಫ್ಸಿ ತಂಡವನ್ನು ಮಣಿಸಿತು.
ಫ್ರೆಂಡ್ಸ್ ಯುನೈಟೆಡ್ ತಂಡದ ರೂಪೇಶ್, 17ನೇ ನಿಮಿಷದಲ್ಲಿ ಗೋಲು ಹೊಡೆದು ಗೆಲುವಿನ ರೂವಾರಿಯಾದರು.
ನಾಲ್ಕರ ಘಟ್ಟ ಪ್ರವೇಶಿಸಿದ್ದ ಎಚ್ಎಎಲ್, ರೆಬೆಲ್ಸ್, ಫ್ರೆಂಡ್ಸ್ ಯುನೈಟೆಡ್ ಮತ್ತು ಮೊಹಮ್ಮಡನ್ ಸ್ಪೋರ್ಟಿಂಗ್ ತಂಡಗಳು ‘ಬಿ’ ಡಿವಿಷನ್ಗೆ ಬಡ್ತಿ ಹೊಂದಿದವು.