ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್: ಮಾತೃ ಪ್ರತಿಷ್ಠಾನ, ಐಎಫ್‌ಎಫ್‌ಗೆ ಭರ್ಜರಿ ಜಯ

Last Updated 27 ಡಿಸೆಂಬರ್ 2020, 16:41 IST
ಅಕ್ಷರ ಗಾತ್ರ

ಬೆಂಗಳೂರು: ಮಾತೃ ಪ್ರತಿಷ್ಠಾನ ಎಫ್‌ಸಿ ಮತ್ತು ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಮಹಿಳಾ ಫುಟ್‌ಬಾಲ್ ಟೂರ್ನಿಯ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದವು. ಭಾನುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ ತಂಡ 6–1ರಲ್ಲಿ ಮಾಡರ್ನ್ ಗರ್ಲ್ಸ್‌ ಎಫ್‌ಸಿಯನ್ನು ಮಣಿಸಿತು.

18ನೇ ನಿಮಿಷದಲ್ಲಿ ಅಲಿಷಾ ಗಳಿಸಿದ ಗೋಲಿನೊಂದಿಗೆ ಮಾತೃ ಪ್ರತಿಷ್ಠಾನ ಖಾತೆ ತೆರೆಯಿತು. 19ನೇ ನಿಮಿಷದಲ್ಲಿ ಸೌಮ್ಯ ಮುನ್ನಡೆಯನ್ನು ಹೆಚ್ಚಿಸಿದರು. 27ನೇ ನಿಮಿಷದಲ್ಲಿ ಮೈತ್ರೇಯಿ ಗೋಲು ಗಳಿಸಿ ಮಾಡರ್ನ್ ತಂಡದಲ್ಲಿ ಭರವಸೆ ಮೂಡಿಸಿದರು. ಆದರೆ 31ನೇ ನಿಮಿಷದಲ್ಲಿ ಅರ್ಪಿತಾ ಗೋಲು ಗಳಿಸಿ ಮಾತೃ ಪ್ರತಿಷ್ಠಾನದ ಮುನ್ನಡೆ ಹೆಚ್ಚಿಸಿದರು. 48ನೇ ನಿಮಿಷದಲ್ಲಿ ಸೌಮ್ಯ ಮತ್ತೊಂದು ಗೋಲು ಗಳಿಸಿ ಎದುರಾಳಿಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದರು. 55 ಮತ್ತು 60ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅರ್ಪಿತ ಅವರು ಹ್ಯಾಟ್ರಿಕ್ ಪೂರೈಸಿದರು.

ರೂಟ್ಸ್ ಫುಟ್‌ಬಾಲ್ ತಂಡವನ್ನು ಏಕಪಕ್ಷೀಯವಾದ ಐದು ಗೋಲುಗಳಿಂದ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಮಣಿಸಿತು. ಪೂರ್ಜಿತಾ (35, 68 ಮತ್ತು 79ನೇ ನಿಮಿಷ) ಹ್ಯಾಟ್ರಿಕ್ ಗಳಿಸಿದರೆ ಸಾವಿತ್ರಿ (43ನೇ ನಿ) ಮತ್ತು ಭಾಗ್ಯ (65ನೇ ನಿ) ಗೆಲುವಿನ ಅಂತರವನ್ನು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT