ಸೋಮವಾರ, ಅಕ್ಟೋಬರ್ 18, 2021
25 °C
ಹ್ಯಾಟ್ರಿಕ್ ಗೋಲು ಗಳಿಸಿದ ರಫಿಯಾ, ನಿವೇದಾ; ಪಾಸ್ ತಂಡಕ್ಕೆ ಭರ್ಜರಿ ಗೆಲುವು

ಮಹಿಳಾ ಫುಟ್‌ಬಾಲ್‌: ಪ್ರಶಸ್ತಿಗೆ ಮಾಡರ್ನ್, ರೂಟ್ಸ್ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಡರ್ನ್ ಗರ್ಲ್ಸ್‌ ಎಫ್‌ಸಿ ಮತ್ತು ರೂಟ್ಸ್ ಫುಟ್‌ಬಾಲ್ ಕ್ಲಬ್ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಮಹಿಳೆಯರ ‘ಎ’ ಡಿವಿಷನ್ ಲೀಗ್‌ನ ಸ್ಪೋರ್ಟಿಂಗ್ ಪ್ಲಾನೆಟ್ ಟ್ರೋಫಿಗಾಗಿ ಬುಧವಾರ ಸೆಣಸಲಿವೆ. ಈ ತಂಡಗಳು ಕ್ರಮವಾಗಿ ಮೊದಲ ಮತ್ತು ಎರಡನೇ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿವೆ.

ಸೋಮವಾರ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ರೂಟ್ಸ್‌ ಫುಟ್‌ಬಾಲ್ ಸ್ಕೂಲ್ ತಂಡ 3–1ರಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ತಂಡವನ್ನು ಮಣಿಸಿತು. ಜೈನಾ (7ನೇ ನಿಮಿಷ) ಹಾಗೂ ಮೈಥಿಲಿ (47 ಮತ್ತು 57ನೇ ನಿ) ರೂಟ್ಸ್‌ ತಂಡಕ್ಕಾಗಿ ಗೋಲು ಗಳಿಸಿದರು. ಕೊಡಗು ಪರ ಏಕೈಕ ಗೋಲು ಜಯಶ್ರೀ ಧಾಮ (20ನೇ ನಿ) ಅವರಿಂದ ಬಂತು.

ಮತ್ತೊಂದು ಪಂದ್ಯದಲ್ಲಿ ಪಾಸ್ ಎಫ್‌ಸಿ 7–1ರಲ್ಲಿ ಜಿಆರ್‌ಕೆ ಗರ್ಲ್ಸ್‌ ಎಫ್‌ಸಿಯನ್ನು ಮಣಿಸಿತು. ಪಾಸ್ ತಂಡಕ್ಕಾಗಿ ರಫಿಯಾ ಮತ್ತು ನಿವೇದಾ ಅವರು ಹ್ಯಾಟ್ರಿಕ್ ಗೋಲು ದಾಖಲಿಸಿದರು. ರಫಿಯಾ 24, 28, 30 ಹಾಗೂ 59ನೇ ನಿಮಿಷಗಳಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು. 33, 55 ಮತ್ತು 61ನೇ ನಿಮಿಷಗಳಲ್ಲಿ ನಿವೇದಾ ಗೋಲು ಗಳಿಸಿದರು. ಜಿಆರ್‌ಕೆ ತಂಡಕ್ಕಾಗಿ ಗೋಲು ಗಳಿಸಿದವರು ತಾರಾ (14ನೇ ನಿ).

ಮಂಗಳವಾರ ವಿರಾಮದ ದಿನವಾಗಿದ್ದು ಬುಧವಾರ ಸಂಜೆ 5 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು