ಸಂತ್ ಇಟಿಯನ್, ಫ್ರಾನ್ಸ್ (ಎಎಫ್‌ಪಿ): ಪ್ರೇಕ್ಷಕರ ಗಲಾಟೆ, ಗೊಂದಲಗಳಿಗೆ ಸಾಕ್ಷಿಯಾದ ಒಲಿಂಪಿಕ್ಸ್ ಫುಟ್‌ಬಾಲ್ ಪಂದ್ಯದಲ್ಲಿ ಮೊರಾಕೊ ತಂಡ ಬುಧವಾರ 2–1 ಗೋಲುಗಳಿಂದ ಪ್ರಬಲ ಅರ್ಜೆಂಟೀನಾ ತಂಡವನ್ನು ಸೋಲಿಸಿತು.

ಮೊದಲು ಪಂದ್ಯ 2–2 ಡ್ರಾ ಎಂದು ನಿರ್ಧಾರವಾಗಿತ್ತು. ಪಂದ್ಯ ಅಧಿಕೃತವಾಗಿ ಮುಗಿಯುವ ಮೊದಲೇ ಪ್ರೇಕ್ಷಕರ ದೊಡ್ಡ ಗುಂಪು ಮೈದಾನಕ್ಕೆ ನುಗ್ಗಿತ್ತು. ಪ್ಲಾಸ್ಟಿಕ್ ಕಪ್‌ಗಳು, ಬಾಟಲಿಗಳನ್ನು ಎಸೆದು ಒಟ್ಟಾರೆ ಗೊಂದಲ ಉಂಟಾಗಿತ್ತು.

ಸ್ಟಾಪೇಜ್ ಅವಧಿಯ 16ನೇ ನಿಮಿಷ ಅರ್ಜೆಂಟೀನಾ ಗಳಿಸಿದ ಗೋಲಿನಿಂದ ಅರ್ಜೆಂಟೀನಾ ಪಂದ್ಯ 2–2 ಸಮಗೊಳಿಸಿದ ಸಂಭ್ರಮದಲ್ಲಿತ್ತು. ಪ್ರೇಕ್ಷಕರೂ ಆ ವೇಳೆ ಕ್ರೀಡಾಂಗಣಕ್ಕೆ ನುಗ್ಗಿದ್ದರು. ಆದರೆ ರೆಫ್ರಿಗಳು ಸೀಟಿ ಉದ್ದಿದ್ದರೂ, ಅದು ಪಂದ್ಯ ಮುಗಿದ ಸಂಕೇತದ ರೀತಿಯಲ್ಲಿರಲಿಲ್ಲ. ಹೀಗಾಗಿ ಪ್ರೇಕ್ಷಕರನ್ನು ಚದುರಿಸಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ಕೆಲಕ್ಷಣ ನಡೆಯಿತು. ವಿಡಿಯೊ ಪರಿಶೀಲನೆಯ ನಂತರ ಮೆಡಿನಾ ಗಳಿಸಿದ ಎರಡನೇ ಗೋಲನ್ನು ಆಫ್ ಸೈಡ್ ಎಂದು ನಿರ್ಣಯಿಸಿದ ಪರಿಣಾಮ ಮೊರಾಕೊ 2–1 ರಿಂದ ಜಯಶಾಲಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.