ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಪ್ಲೇ ಆಫ್‌ಗೆ ಮುಂಬೈ ಸಿಟಿ ಎಫ್‌ಸಿ

Last Updated 22 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಆತಿಥೇಯರ ಕನಸನ್ನು ನುಚ್ಚು ನೂರು ಮಾಡಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪ್ಲೇ ಆಫ್‌ ಹಂತಕ್ಕೆ ಲಗ್ಗೆ ಇರಿಸಿತು.

ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ 3–1ರಿಂದ ಎಟಿಕೆಯನ್ನು ಮಣಿಸಿತು.

ಪ್ಲೇ ಆಫ್ ಹಂತ ತಲುಪಲು ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿತ್ತು. ಹೀಗಾಗಿ ಫುಟ್‌ಬಾಲ್ ಪ್ರಿಯರು ಭಾರಿ ನಿರೀಕ್ಷೆಯಿಂದ ಗ್ಯಾಲರಿಗಳಲ್ಲಿ ತುಂಬಿದ್ದರು. ಅವರಿಗೆ ಎರಡೂ ತಂಡಗಳು ಭರಪೂರ ರಂಜನೆ ನೀಡಿದವು.

ಮೊಡೊ ಸೊಗೊ ಹ್ಯಾಟ್ರಿಕ್ ಗೋಲು ಗಳಿಸಿ ಮುಂಬೈ ಪಾಳಯದಲ್ಲಿ ಸಂಭ್ರಮದ ಹೊಳೆ ಹರಿಸಿದರು. ಅವರ ಕಾಲ್ಚಳಕದ ಮೋಡಿಗೆ ಪ್ರೇಕ್ಷಕರು ಕೂಡ ಕುಣಿದು ಕುಪ್ಪಳಿಸಿದರು. ಎಟಿಕೆ ಪರ ಏಕೈಕ ಗೋಲನ್ನು ಆ್ಯಂಡ್ರೆ ಬೈಕಿ ಗಳಿಸಿದರು.

26ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಮೊಡೊ ಸೊಗೊ ಮುಂಬೈಗೆ ಮುನ್ನಡೆ ತಂದುಕೊಟ್ಟರು. 39 ಮತ್ತು 60ನೇ ನಿಮಿಷಗಳಲ್ಲಿ ಮತ್ತೆ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಮುನ್ನಡೆಗೆ ಸತತ ಪ್ರಯತ್ನ ಮಾಡಿದ ಎಟಿಕೆ 67ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಾಧಾನಪಟ್ಟುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT