ಬೆಂಗಳೂರು: ಮರ್ಫಿ ಟೌನ್ ತಂಡವು ರಾಜ್ಯ ಫುಟ್ಬಾಲ್ ಸಂಸ್ಥೆ ಮತ್ತು ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸ್ಥಳೀಯ ಅಂತರ ತಂಡಗಳ ಟೂರ್ನಿಯಲ್ಲಿ ಹಿರಿಯರ ಮತ್ತು ಯೂತ್ ವಿಭಾಗಗಳ ಫೈನಲ್ ಪ್ರವೇಶಿಸಿತು.

ಹಿರಿಯರ ವಿಭಾಗದ ಸೆಮಿಫೈನಲ್ನಲ್ಲಿ ಜೀವನಹಳ್ಳಿ ತಂಡವನ್ನು 1–0ಯಿಂದ ಮರ್ಫಿಟೌನ್ ಮಣಿಸಿತು. 40+2ನೇ ನಿಮಿಷದಲ್ಲಿ ಸತೀಶ್ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಶಾಂತಿನಗರ ತಂಡ 2–0ಯಿಂದ ಪೆರಿಯಾರ್ ನಗರ ತಂಡವನ್ನು ಸೋಲಿಸಿತು. 16 ಮತ್ತು 40+1ನೇ ನಿಮಿಷಗಳಲ್ಲಿ ಲಾರೆನ್ಸ್ ಚೆಂಡನ್ನು ಗುರಿ ಮುಟ್ಟಿಸಿದರು.

ಯೂತ್ ವಿಭಾಗದ ಫೈನಲ್ ಪಂದ್ಯ ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ನಡೆಯಲಿದ್ದು ಮರ್ಫಿ ಟೌನ್ ಮತ್ತು ಗೌತಮಪುರ ತಂಡಗಳು ಸೆಣಸಲಿವೆ. ಒಂಬತ್ತು ಗಂಟೆಗೆ ಹಿರಿಯರ ಹಣಾಹಣಿ ನಡೆಯಲಿದೆ. 11 ಗಂಟೆಗೆ ನಡೆಯಲಿರುವ ‘ಸಿ’ ಡಿವಿಷನ್ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಪ್ಯಾಂಥರ್ಸ್ ಎಫ್ಸಿ ಮತ್ತು ರೊನಾಲ್ಡೊ ಎಫ್ಸಿ ಮುಖಾಮುಖಿಯಾಗಲಿವೆ.

10 ಗಂಟೆಗೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆಯಲಿದೆ ಎಂದು ಕೆಎಸ್ಎಫ್ಎ–ಬಿಡಿಎಫ್ಎ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.