ಮೂಸಾ ಕಾಲ್ಚಳಕಕ್ಕೆ ಮಣಿದ ಐಸ್‌ಲ್ಯಾಂಡ್‌

7

ಮೂಸಾ ಕಾಲ್ಚಳಕಕ್ಕೆ ಮಣಿದ ಐಸ್‌ಲ್ಯಾಂಡ್‌

Published:
Updated:

ವೊಲ್ಗೊಗ್ರಾಂಡ್‌: ಅಹಮ್ಮದ್ ಮೂಸಾ ಅವರ ಕಾಲ್ಚಳಕಕ್ಕೆ ಬೆರಗಾದ ಐಸ್‌ಲ್ಯಾಂಡ್‌ ತಂಡ ವಿಶ್ವಕಪ್‌ನ ಶುಕ್ರವಾರದ ಪಂದ್ಯದಲ್ಲಿ ನೈಜೀರಿಯಾಗೆ ಮಣಿಯಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಆದರೆ 49 ಮತ್ತು 75ನೇ ನಿಮಿಷದಲ್ಲಿ ಗೋಲು ಗಳಿಸಿದ ಮೂಸಾ ನೈಜೀರಿಯಾವನ್ನು ಗೆಲುವಿನ ದಡ ಸೇರಿಸಿದರು.

ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿದ ಐಸ್‌ಲ್ಯಾಂಡ್‌ ದ್ವಿತೀಯಾರ್ಧದಲ್ಲಿ ಕಳೆಗುಂದಿತು. ಇದರ ಲಾಭ ಪಡೆದುಕೊಂಡ ನೈಜೀರಿಯಾ ಚೆಂಡಿನ ಮೇಲೆ ಆಧಿಪತ್ಯ ಸ್ಥಾಪಿಸಿತು. ಮೊದಲಾರ್ಧದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಪರದಾಡಿದ ನೈಜೀರಿಯಾ ದ್ವಿತೀಯಾರ್ಧದಲ್ಲಿ ರಣತಂತ್ರವನ್ನು ಬದಲಿಸಿತು. ಇದು ಯಶಸ್ಸು ಕಂಡಿತು.

ಶುಕ್ರವಾರದ ಜಯದೊಂದಿಗೆ ಮೂರು ಪಾಯಿಂಟ್‌ಗಳೊಂದಿಗೆ ನೈಜೀರಿಯಾ ‘ಡಿ’ ಗುಂಪಿನ  ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !