ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಕೋಚ್‌ ಸ್ಥಾನಕ್ಕೆ ಹಜಿಮೆ ಮೊರಿಯಾಸು

Last Updated 26 ಜುಲೈ 2018, 13:59 IST
ಅಕ್ಷರ ಗಾತ್ರ

ಟೊಕಿಯೊ : ಜಪಾನ್‌ ಫುಟ್‌ಬಾಲ್‌ ತಂಡದ ತರಬೇತುದಾರನ ಸ್ಥಾನಕ್ಕೆ ಹಜಿಮೆ ಮೊರಿಯಾಸು ಅವರನ್ನು ಆಯ್ಕೆ ಮಾಡಲಾಗಿದೆ.

‘ಈ ಹುದ್ದೆಗೆ ಜುರ್ಗನ್‌ ಕ್ಲಿನ್ಸ್‌ಮನ್‌ ಅವರನ್ನು ಆಯ್ಕೆ ಮಾಡಲಾಗುವುದು ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆರ್ಸೆನಲ್‌ನ ತರಬೇತುದಾರರಾಗಿದ್ದ ಅರ್ಸೆನ್‌ ವೆಂಗರ್‌ ಈ ಸ್ಥಾನದ ಆಯ್ಕೆ ಪಟ್ಟಿಯಲ್ಲಿದ್ದರು. ಆದರೆ, ಅಂತಿಮವಾಗಿ 49 ವರ್ಷದ ಹಜಿಮೆ ಅವರನ್ನು ಆಯ್ಕೆ ಮಾಡಲಾಯಿತು’ ಎಂದು ಜಪಾನ್‌ ಫುಟ್‌ಬಾಲ್‌ ಮಂಡಳಿ (ಜೆಎಸ್‌ಎ)ಯು ತಿಳಿಸಿದೆ.

49 ವರ್ಷದ ಹಜಿಮೆ, 2020ರ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಜಪಾನ್‌ನ 21 ವರ್ಷದೊಳಗಿನ ಕ್ರೀಡಾಪಟುಗಳ ತಂಡಕ್ಕೆ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ತಂಡದಲ್ಲಿ ಹಲವು ಬದಲಾವಣೆ ಮಾಡಬೇಕಿದೆ. ಆಟಗಾರರಿಂದ ನೈಜ ಸಾಮರ್ಥ್ಯಕ್ಕೆ ಅನುಗುಣವಾಗಿ ತಂಡ ಕಟ್ಟಬೇಕಿದೆ’ ಎಂದು ಹಜಿಮೆ ಇಲ್ಲಿನ ಸುದ್ದಿಗಾರರಿಗೆ ಹೇಳಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಜಪಾನ್‌ ತಂಡವು ಪ್ರೀ ಕ್ವಾರ್ಟರ್‌ ಹಂತ ತಲು‍ಪಿತ್ತು. ಇದರಲ್ಲಿ ಬೆಲ್ಜಿಯಂ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ನಂತರ ತಂಡದ ತರಬೇತುದಾರರಾಗಿದ್ದ ಅಕಿರಾ ನಿಶಿನೊ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT