ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಪೆ ಪ್ರದರ್ಶನ: ಕೋಚ್‌ ಕೈಬಿಡಲು ಬಿಎಫ್‌ಸಿ ನಿರ್ಧಾರ

Published 9 ಡಿಸೆಂಬರ್ 2023, 18:29 IST
Last Updated 9 ಡಿಸೆಂಬರ್ 2023, 18:29 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಋತುವಿನಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಕಳಪೆ ಪ್ರದರ್ಶನದ ಬೆನ್ನಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತನ್ನ ಮುಖ್ಯ ಕೋಚ್‌ ಸೈಮನ್ ಗ್ರೇಸನ್ ಮತ್ತು ಅಸಿಸ್ಟೆಂಟ್‌ ಕೋಚ್‌ ನೀಲ್‌ ಮೆಕ್‌ಡೊನಾಲ್ಡ್‌ ಅವರ ಸೇವೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ.

ಭಾರತ ತಂಡದ ಮಾಜಿ ಆಟಗಾರ ರೆನೆಡಿ ಸಿಂಗ್ ಅವರು ನೂತನ ಮುಖ್ಯ ಕೋಚ್‌ ನೇಮಕವಾಗುವವರೆಗೆ ತಂಡದ ಕೋಚಿಂಗ್‌ ಉಸ್ತುವಾರಿ ವಹಿಸಲಿದ್ದಾರೆ ಎಂದು ಕ್ಲಬ್‌ ಹೇಳಿಕೆಯಲ್ಲಿ ತಿಳಿಸಿದೆ.

ಶುಕ್ರವಾರ, ಮುಂಬೈ ಎಫ್‌ಸಿ ವಿರುದ್ಧ ತವರಿನಲ್ಲಿ 0–4 ಗೋಲುಗಳಿಂದ ಹೊಡೆಸಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ.

ಇಂಗ್ಲೆಂಡ್‌ನ ಗ್ರೇಸನ್, 2022–23ರ ಋತುವಿನಲ್ಲಿ ಬಿಎಫ್‌ಸಿ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ನಂತರ ತಂಡವು ಐಎಸ್‌ಎಲ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಸೂಪರ್‌ಕಪ್‌ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಜೊತೆಗೆ ಡ್ಯುರಾಂಡ್‌ ಕಪ್‌ನಲ್ಲೂ ಚಾಂಪಿಯನ್ ಆಗಿತ್ತು. ಆದರೆ ಈ ಋತುವಿನಲ್ಲಿ ಬಿಎಫ್‌ಸಿ ದಯನೀಯ ಸ್ಥಿತಿಯಲ್ಲಿದ್ದು, 9 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯಗಳಿಸಿದ್ದು, ತಲಾ ನಾಲ್ಕು ಪಂದ್ಯಗಳಲ್ಲಿ ‘ಡ್ರಾ’ ಮತ್ತು ಸೋಲು ಕಂಡಿದೆ. ಲೀಗ್‌ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT