ಮಂಗಳವಾರ, ಅಕ್ಟೋಬರ್ 26, 2021
20 °C

ಬೆಂಗಳೂರು–ಆರ್‌ಯುಎಫ್‌ಸಿ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂದ್ಯದ ಕೊನೆಯ ಹಂತದಲ್ಲಿ ಗೋಲು ಬಿಟ್ಟುಕೊಟ್ಟ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಐ–ಲೀಗ್ ಅರ್ಹತಾ ಸುತ್ತಿನ ಗುಂಪು ಹಂತದ ಪಂದ್ಯದಲ್ಲಿ ಡ್ರಾಗೆ ಸಮಾಧಾನಪಟ್ಟುಕೊಂಡಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ರಾಜಸ್ಥಾನ್ ಯುನೈಟೆಡ್ ಎಫ್‌ಸಿ ಎದುರಿನ ಪಂದ್ಯ 1–1ರಲ್ಲಿ ಸಮ ಆಯಿತು.

ಮೊದಲ 40 ನಿಮಿಷಗಳಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿಯ ಆಟವಾಡಿದವು. 41ನೇ ನಿಮಿಷದಲ್ಲಿ ಆತಿಥೇಯರು ಮೇಲುಗೈ ಸಾಧಿಸಿದರು. ಪೆಡ್ರೊ ಮಾನ್ಜಿ ಗೋಲು ಗಳಿಸಿ ಬೆಂಗಳೂರಿಗೆ ಮುನ್ನಡೆ ತಂದುಕೊಟ್ಟರು. ಫ್ರೀ ಕಿಕ್‌ನಲ್ಲಿ ಚೆಂಡನ್ನು ಲೂಕಾ ಜೇಸನ್ ಅವರತ್ತ ಸಂಜು ಪ್ರಧಾನ್ ಒದ್ದರು. ಲೂಕಾ ಅರವಿಂದ ಲಭಿಸಿದ ಚೆಂಡನ್ನು ವಿಶಾಲ್ ಜೂನ್ ಅವರು ಗುರಿಯತ್ತ ಒದ್ದಿದ್ದರು. ಆದರೆ ಅದು ಕಂಬಕ್ಕೆ ತಾಗಿ ವಾಪಸ್ ಬಂದಿತು. ವಾಪಸ್ ಬಂದ ಚೆಂಡನ್ನು ಪೆಡ್ರೊ ಮೋಹಕವಾಗಿ ಗೋಲುಪೆಟ್ಟಿಗೆಯತ್ತ ಒದ್ದರು.

78ನೇ ನಿಮಿಷದಲ್ಲಿ ಸುಖಜೀತ್ ಸಿಂಗ್ ಗಳಿಸಿದ ಗೋಲಿನ ಮೂಲಕ ರಾಜಸ್ಥಾನ್ ತಂಡ ಸಮಬಲ ಸಾಧಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು