ಬುಧವಾರ, ಫೆಬ್ರವರಿ 19, 2020
21 °C

ಯುವೆಂಟಸ್‌ ಸೋಲು ತಪ್ಪಿಸಿದ ರೊನಾಲ್ಡೊ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಿಲಾನ್‌ : ಕ್ರಿಸ್ಟಿಯಾನೊ ರೊನಾಲ್ಡೊ, ಶುಕ್ರವಾರ ಯುವೆಂಟಸ್‌ ತಂಡಕ್ಕೆ ಆಪತ್ಬಾಂಧವನಾದರು.

ಹೆಚ್ಚುವರಿ ಅವಧಿಯಲ್ಲಿ (ಇಂಜುರಿ) ರೊನಾಲ್ಡೊ ಗಳಿಸಿದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಎ.ಸಿ.ಮಿಲಾನ್‌ ವಿರುದ್ಧದ ಇಟಾಲಿಯನ್‌ ಕಪ್‌ ಮೊದಲ ಲೆಗ್‌ನ ಸೆಮಿಫೈನಲ್‌ನಲ್ಲಿ ಸೋಲಿನಿಂದ ಪಾರಾಯಿತು.

ಸ್ಯಾನ್‌ ಸಿರೊ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಣ ಈ ಹಣಾಹಣಿ 1–1 ಗೋಲುಗಳಿಂದ ಸಮಬಲವಾಯಿತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಎರಡು ತಂಡಗಳೂ ಆರಂಭದಿಂದಲೇ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು.

ದ್ವಿತೀಯಾರ್ಧದ ಆರಂಭದಲ್ಲಿ ಮಿಲಾನ್‌ ಮೇಲುಗೈ ಸಾಧಿಸಿತು. 61ನೇ ನಿಮಿಷದಲ್ಲಿ ಈ ತಂಡದ ಆ್ಯಂಟೆ ರೆಬಿಕ್‌ ಗೋಲು ಹೊಡೆದರು. ನಿಗದಿತ ಅವಧಿಯ (90 ನಿಮಿಷ) ಆಟ ಮುಗಿದಾಗ ಮಿಲಾನ್‌ ತಂಡ 1–0 ಮುನ್ನಡೆ ಗಳಿಸಿತ್ತು.

ಹೆಚ್ಚುವರಿ ಅವಧಿಯ ಶುರುವಿನಲ್ಲೇ (90+1ನೇ ನಿಮಿಷ) ಯುವೆಂಟಸ್‌ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ರೊನಾಲ್ಡೊ ಸಂಭ್ರಮಿಸಿದರು. ಉಭಯ ತಂಡಗಳ ನಡುವಣ ಎರಡನೇ ಲೆಗ್‌ನ ಸೆಮಿಫೈನಲ್‌ ಪಂದ್ಯವು ಮಾರ್ಚ್‌ 5ರಂದು ಅಲಯನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು