ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಆಟಕ್ಕೆ ಅಂಗಣ ಸಿದ್ಧ

ದೋಹಾದಲ್ಲಿ ಪೋರ್ಚುಗಲ್–ಘಾನಾ ಹಣಾಹಣಿ ಇಂದು
Last Updated 23 ನವೆಂಬರ್ 2022, 19:44 IST
ಅಕ್ಷರ ಗಾತ್ರ

ದೋಹಾ (ಎಪಿ): ಪ್ರಸ್ತುತ ಫುಟ್‌ಬಾಲ್ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ಫಿಫಾ ವಿಶ್ವಕಪ್ ಅಂಗಳಕ್ಕಿಳಿಯಲಿದ್ದಾರೆ.

ಇದು ಅವರು ಆಡುತ್ತಿರುವ ಐದನೇ ವಿಶ್ವಕಪ್ ಟೂರ್ನಿಯಾಗಿದೆ. ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಇದಾಗಲಿದೆ. 37 ವರ್ಷದ ರೊನಾಲ್ಡೊ ಮಂಗಳವಾರವಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದದ್ದು ದೊಡ್ಡ ಸುದ್ದಿಯಾಗಿದೆ. ಸದ್ಯಕ್ಕೆ ಹೊಸ ಕ್ಲಬ್‌ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಶ್ವಕಪ್ ಟೂರ್ನಿಯಲ್ಲಿ ವಿನಿಯೋಗಿಸುವತ್ತ ಚಿತ್ತ ನೆಟ್ಟಿದ್ದಾರೆ.

ದೋಹಾದ 974 ಕ್ರೀಡಾಂಗಣದಲ್ಲಿ ರೊನಾಲ್ಡೊ ಅವರ ಪೋರ್ಚುಗಲ್ ತಂಡವು ಘಾನಾ ವಿರುದ್ಧ ಆಡಲಿದೆ. ಘಾನಾ ತಂಡಕ್ಕೆ ಪೋರ್ಚುಗಲ್ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ.

ಆದರೆ ಮಂಗಳವಾರ ಸೌದಿ ಅರೇಬಿಯಾ ತಂಡವು ಲಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಬಳಗದ ವಿರುದ್ಧ ಗಳಿಸಿದ ಅಚ್ಚರಿ ಗೆಲುವಿನ ಚರ್ಚೆ ಇನ್ನೂ ಫುಟ್‌ಬಾಲ್ ವಲಯದಲ್ಲಿ ನಡೆಯುತ್ತಿದೆ. ಆದ್ದರಿಂದ ಯಾವ ತಂಡವೂ ಇಲ್ಲಿ ದುರ್ಬಲವಲ್ಲವೆಂಬುದಂತೂ ಸತ್ಯ.

ಘಾನಾ ತಂಡದ ಥಾಮಸ್ ಪಾರ್ಟಿ ಮತ್ತು ಮೊಹಮ್ಮದ್ ಕುಡೂಸ್ ಅವರು ಇತ್ತೀಚಿನ ಲೀಗ್ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದ್ದಾರೆ.

ಸದ್ಯ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಮತ್ತು ಗೋಲು ಗಳಿಸಿರುವ ಪೋರ್ಚುಗಲ್ ಆಟಗಾರನೆಂಬ ಹೆಗ್ಗಳಿಕೆ ರೊನಾಲ್ಡೊ ಅವರದ್ದು. ತಂಡದ ಮ್ಯಾನೇಜರ್ ಫರ್ನಾಂಡೊ ಸ್ಯಾಂಟೋಸ್‌ ಅವರಿಗೂ ಫಾರ್ವರ್ಡ್ ಆಟಗಾರ ರೊನಾಲ್ಡೊ ಅವರಿಂದ ದೊಡ್ಡ ನಿರೀಕ್ಷೆ ಇದೆ. ಮಿಡ್‌ಫೀಲ್ಡ್ ಮತ್ತು ಅಟ್ಯಾಕಿಂಗ್‌ಗೆ ತಂಡದ ಆಟಗಾರರು ಸಿದ್ಧಹಸ್ತರಾಗಿದ್ದಾರೆ. ಪಂದ್ಯದ ಕೊನೆಯ ಕ್ಷಣಗಳಲ್ಲಿ ಕಾಲ್ಚಳಕ ತೋರುವ ರೊನಾಲ್ಡೊ ಅವರನ್ನು ನಿಯಂತ್ರಿಸುವತ್ತಲೇ ಘಾನಾ ಆಟಗಾರರು ತಂತ್ರಗಾರಿಕೆ ರೂಪಿಸುವ ಸಾಧ್ಯತೆ ಹೆಚ್ಚಿದೆ. ರೊನಾಲ್ಡೊ ಅವರಿಗೆ ವಿಶ್ವಕಪ್ ಉಡುಗೊರೆ ಕೊಡುವ ಮೂಲಕ ಬೀಳ್ಕೊಡುಗೆ ನೀಡುವ ಛಲದಲ್ಲಿ ಪೋರ್ಚುಗಲ್ ತಂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT