ಶನಿವಾರ, ಜೂನ್ 6, 2020
27 °C

ಬಂಡೆಸ್‌ಲಿಗಾ: ದಾಖಲೆ ವೀಕ್ಷಕರು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬರ್ಲಿನ್‌ : ಇಲ್ಲಿನ ಖಾಲಿ ಕ್ರೀಡಾಂಗಣದಲ್ಲಿ ಶನಿವಾರ ಪುನರಾರಂಭವಾದ ಬಂಡೆಸ್‌ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯಗಳನ್ನು ದಾಖಲೆಯ 60 ಲಕ್ಷಕ್ಕಿಂತ ಜನ ವೀಕ್ಷಿಸಿದ್ದಾರೆ. ಜರ್ಮನಿಯ ಸ್ಕೈ ಟಿವಿ ವಾಹಿನಿಯಲ್ಲಿ ಪ್ರಸಾರವಾದ ಪಂದ್ಯಗಳ ವೀಕ್ಷಕರ ಸಂಖ್ಯೆ ಹೊಸ ದಾಖಲೆ ಸೃಷ್ಟಿಸಿದೆ’ ಎಂದು ಡಿಡಬ್ಲ್ಯುಡಿಎಲ್.ಡಿಇ ವೆಬ್‌ಸೈಟ್‌ ವರದಿ ಮಾಡಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳ ಕಾರಣ ಎರಡು ತಿಂಗಳ ವಿರಾಮದ ಬಳಿಕ ಪಂದ್ಯಗಳು ಆರಂಭವಾಗಿವೆ. 

ಸ್ಕೈ ವಾಹಿನಿ ಈ ಮೊದಲು 36 ಲಕ್ಷ ಚಂದಾದಾರರನ್ನು ಹೊಂದಿತ್ತು. ಹೀಗಾಗಿ ಈಗ ಪಂದ್ಯಗಳನ್ನು ವೀಕ್ಷಿಸಿದವರ ಸಂಖ್ಯೆ ದ್ವಿಗುಣವಾದಂತಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು