ಶುಕ್ರವಾರ, ಜೂನ್ 5, 2020
27 °C

ಕ್ಷಮೆ ಕೋರಿದ ಎಫ್‌ಸಿ ಸೋಲ್‌ ಕ್ಲಬ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೋಲ್‌ : ವಾರಾಂತ್ಯ ಫುಟ್‌ಬಾಲ್‌ ಲೀಗ್‌ ಪಂದ್ಯದ ವೇಳೆ ಪ್ರೇಕ್ಷಕರ ಆಸನಗಳಲ್ಲಿ ಲೈಂಗಿಕ  ಗೊಂಬೆ ಗಳನ್ನು (ಸೆಕ್ಸ್ ಡಾಲ್ಸ್‌) ಇಟ್ಟು ‘ತೀವ್ರ ಮುಜುಗರ’ ಮೂಡಿಸಲು ಕಾರಣವಾಗಿದ್ದಕ್ಕೆ ದಕ್ಷಿಣ ಕೊರಿಯಾದ ಪ್ರಮುಖ ಫುಟ್‌ಬಾಲ್‌ ಕ್ಲಬ್‌ ಸೋಮವಾರ ಕ್ಷಮಾಪಣೆ ಕೋರಿದೆ.

ಕೊರೊನಾ ಸೋಂಕಿನ ಕಾರಣ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ಪಂದ್ಯ ಗಳು ನಡೆಯುತ್ತಿವೆ. ಈ ವೇಳೆ ಖಾಲಿ ಆಸನಗಳಲ್ಲಿ ಇಂಥ ಬೊಂಬೆಗಳನ್ನಿ ಡಲಾಗಿತ್ತು. ಆದರೆ, ‘ಇದಕ್ಕೂ ಲೈಂಗಿಕಾರ್ಷಣೆಯ ಗೊಂಬೆಗಳಿಗೂ ಸಂಬಂಧವಿಲ್ಲ‌’ ಎಂದು ಎಫ್‌ಸಿ ಸೋಲ್‌ ಕ್ಲಬ್‌ ತಿಳಿಸಿದೆ.

ಆದರೆ ಕೆಲವು ‘ಕೃತಕ ಪ‍್ರೇಕ್ಷಕ’ರಿಗೆ ತೊಡಿಸಲಾಗಿದ್ದ ಟಿ ಶರ್ಟ್‌ಗಳ ಮೇಲೆ ‘ಲೈಂಗಿಕ ಆಟಕೆ’ ಮಾರಾಟ ಸಂಸ್ಥೆಯ ಲೋಗೊ ಇದ್ದವು. ಇತರ ಕೆಲವು ಗೊಂಬೆಗಳಿಗೆ ಮಾಸ್ಕ್‌ ತೊಡಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು