ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಎಎಸ್‌ಸಿ, ಎಂಇಜಿಗೆ ಜಯ

ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಫುಟ್‌ಬಾಲ್ ಟೂರ್ನಿ
Last Updated 25 ಫೆಬ್ರವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಎಎಸ್‌ಸಿ, ಎಂಇಜಿ ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡಗಳು ಇಲ್ಲಿ ನಡೆಯುತ್ತಿರುವ ಸ್ಟಾಫರ್ಡ್ ಚಾಲೆಂಜ್ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವು ಪಡೆದವು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 3–2 ಗೋಲುಗಳಿಂದ ಗೋಕುಲಂ ಕೇರಳ ಎಫ್‌ಸಿ ತಂಡವನ್ನು ಮಣಿಸಿತು.

ರೋಚಕ ಹಣಾಹಣಿ ನಡೆದ ಪಂದ್ಯದಲ್ಲಿ ಶಕ್ತಿ ಗುರುಂಗ್‌ (15ನೇ ನಿ.), ಅಜೇಂದ್ರ ಸಿಂಗ್ (35) ಮತ್ತು ಇ.ಅಲ್ವಿನ್‌ (82) ಅವರು ಎಎಸ್‌ಸಿ ಪರ ಗೋಲು ಗಳಿಸಿದರು. ಗೋಕುಲಂ ತಂಡದ ಎರಡೂ ಗೋಲುಗಳನ್ನು ಸ್ಯಾಮುಯೆಲ್ ಮನ್ಸಾ (14 ಹಾಗೂ 24ನೇ ನಿ.) ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ಎಂಇಜಿ ತಂಡ 2–1 ಗೋಲುಗಳಿಂದ ಎಫ್‌ಸಿ ಡೆಕ್ಕನ್‌ ವಿರುದ್ಧ ಗೆದ್ದಿತು.
ವಿಜಯಿ ತಂಡದ ಪರ ಶೈಕ್‌ ಮುಜೀಬ್‌ (35 ಮತ್ತು 60ನೇ ನಿ.) ಹಾಗೂ ಡೆಕ್ಕನ್‌ ತಂಡ ಪರ ಎಸ್‌.ಸಚ್ಚಿದಾನಂದ (42) ಗೋಲು ಗಳಿಸಿದರು.

‘ಎ’ ಗುಂಪಿನ ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ 4–0 ಗೋಲುಗಳಿಂದ ಡೆಂಪೊ ಎಸ್‌ಸಿ ವಿರುದ್ಧ ಜಯಿಸಿತು.

ಸೆಲ್ವಿನ್‌ ಫ್ರೇಜರ್‌ ಮಿರಾಂಡ ಅವರು 6ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಇತರ ಗೋಲುಗಳನ್ನು ಇರ್ಫಾನ್‌ ಯಾದವಾಡ್ (33), ಸುಭಾ ಘೋಷ್‌ (89) ಮತ್ತು ಏನಮ್ ಜುರ್ವಾ (90+1) ತಂದಿತ್ತರು.

ಇಂದಿನ ಪಂದ್ಯಗಳು

ಕೆಂಕ್ರೆ ಎಫ್‌ಸಿ– ಶ್ರೀನಿಧಿ ಡೆಕ್ಕನ್‌ ಎಫ್‌ಸಿ (ಬೆಳಿಗ್ಗೆ 8.15)

ಚೆನ್ನೈಯಿನ್‌ ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ (ಬೆಳಿಗ್ಗೆ 10.45)

ಬಿಎಫ್‌ಸಿ– ಡೆಲ್ಲಿ ಎಫ್‌ಸಿ (ಮಧ್ಯಾಹ್ನ 1.30)

ಎಆರ್‌ಎ ಎಫ್‌ಸಿ– ಕೇರಳ ಯುನೈಟೆಡ್ ಎಫ್‌ಸಿ (ಸಂಜೆ 4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT