ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಗೋಕುಲಂ ಕಟ್ಟಿಹಾಕಿದ ರೂಟ್ಸ್

Last Updated 23 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ದಿಟ್ಟ ಆಟವಾಡಿದ ರೂಟ್ಸ್ ಎಫ್‌ಸಿ ಬೆಂಗಳೂರು ತಂಡದವರು ಇಲ್ಲಿ ಗುರುವಾರ ಆರಂಭವಾದ ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಗೋಕುಲಂ ಕೇರಳ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿದರು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯ 1–1ರಿಂದ ಸಮಬಲವಾಯಿತು.

ನಿಧಾನಗತಿಯ ಆರಂಭ ಮಾಡಿದ ಉಭಯ ತಂಡಗಳು ಹಂತಹಂತವಾಗಿ ಆಟದ ವೇಗವನ್ನು ಹೆಚ್ಚಿಸಿದವು. ಆದರೆ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಚೆಂಡು ಹೆಚ್ಚು ಹೊತ್ತು ತವರಿನ ತಂಡ ರೂಟ್ಸ್ ಆಟಗಾರರ ಬಳಿಯೇ ಇತ್ತು. ಹಲವು ಬಾರಿ ಗೋಲು ದಾಖಲಿಸುವ ತಂಡದ ಪ್ರಯತ್ನ ವಿಫಲವಾಯಿತು.

ದ್ವಿತೀಯಾರ್ಧದಲ್ಲಿ ಆಟ ಇನ್ನಷ್ಟು ರಂಗೇರಿತು. ಯೋಹಾನ್‌ ವಿಕ್ಟರ್ ಬ್ರಿಟ್ಟೊ ಅವರು 64ನೇ ಚಾಣಾಕ್ಷತನದಿಂದ ಚೆಂಡನ್ನು ಗುರಿ ಸೇರಿಸಿ ರೂಟ್ಸ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆ ಬಳಿಕವೂ ತಂಡವು ಅದೇ ಲಯ ಕಾಯ್ದುಕೊಂಡಿತ್ತು. ಆದರೆ 87ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸಿದ ಗೋಕುಲಂನ ಸ್ಯಾಮ್ಯುಯೆಲ್‌ ಮೆನ್ಶಾ ಕೊನ್ನೆ ರೂಟ್ಸ್ ಜಯದ ಆಸೆಗೆ ತಣ್ಣೀರೆರೆಚಿದರು. ರೂಟ್ಸ್ ಆಟಗಾರರ ನಿಖರ ಪಾಸ್‌ಗಳು ಪಂದ್ಯದಲ್ಲಿ ಗಮನಸೆಳೆದವು.

ಡೆಂಪೊ– ಎಂಇಜಿ ಸಮಬಲ: ಡೆಂಪೊ ಎಫ್‌ಸಿ ಮತ್ತು ಎಂಇಜಿ ಸೆಂಟರ್ ಎಫ್‌ಸಿ ನಡುವಣ ‘ಎ’ ಗುಂಪಿನ ಪಂದ್ಯವೂ ಡ್ರಾನಲ್ಲಿ ಅಂತ್ಯವಾಯಿತು. ಎಂಇಜಿ ತಂಡಕ್ಕಾಗಿ ಆಯುಷ್‌ 16ನೇ ನಿಮಿಷದಲ್ಲೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಡೆಂಪೊ ಎಫ್‌ಸಿಯ ಶ್ರೇಯಸ್‌ ಗಜಾನನ ನಾಯ್ಕ 82ನೇ ನಿಮಿಷದಲ್ಲಿ ದಾಖಲಿಸಿದ ಗೋಲು ಸಮಬಲಕ್ಕೆ ಕಾರಣವಾಯಿತು.

ಇಂದಿನ ಪಂದ್ಯಗಳು

‘ಸಿ’ ಗುಂಪು: ಬೆಂಗಳೂರು ಎಫ್‌ಸಿ– ಶ್ರೀನಿಧಿ ಡೆಕ್ಕನ್‌ (ಬೆಳಿಗ್ಗೆ 8.15ರಿಂದ)

‘ಡಿ’ ಗುಂಪು: ಚೆನ್ನೈಯಿನ್ ಎಫ್‌ಸಿ– ಎಎಆರ್‌ಸಿ ಎಫ್‌ಸಿ (ಬೆಳಿಗ್ಗೆ 10.45ರಿಂದ)

ಕಿಕ್‌ಸ್ಟಾರ್ಟ್‌ ಎಫ್‌ಸಿ–ಕೇರಳ ಯುನೈಟೆಡ್ ಎಫ್‌ಸಿ (ಮ.1.30ರಿಂದ)

‘ಸಿ’ ಗುಂಪು: ಕೆಂಕ್ರೆ ಎಫ್‌ಸಿ– ಡೆಲ್ಲಿ ಎಫ್‌ಸಿ (ಸಂಜೆ 4ರಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT