ಶನಿವಾರ, ಮೇ 21, 2022
25 °C
ಏಷ್ಯಾಕಪ್‌ ಫುಟ್‌ಬಾಲ್‌ ಅರ್ಹತಾ ಪಂದ್ಯಗಳು: ಸಂಭಾವ್ಯರ ತಂಡ ಪ್ರಕಟ

ಭಾರತ ತಂಡಕ್ಕೆ ಬಳ್ಳಾರಿಯಲ್ಲಿ ಶಿಬಿರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಅಂತಿಮ ಸುತ್ತಿನ ಅರ್ಹತಾ ಪಂದ್ಯಗಳಿಗಾಗಿ ಭಾರತದ 41 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ.

ಜೂನ್‌ 8ರಿಂದ ಅರ್ಹತಾ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಕರ್ನಾಟಕದ ಬಳ್ಳಾರಿಯಲ್ಲಿ ತಂಡದ ತರಬೇತಿಯು ಇದೇ 23ರಿಂದ ಮೇ 8ರವರೆಗೆ ನಡೆಯಲಿದೆ. ಬಳಿಕ ಆಟಗಾರರು ಕೋಲ್ಕತ್ತಕ್ಕೆ ತೆರಳಲಿದ್ದು, ಟೂರ್ನಿ ಆರಂಭವಾಗುವವರೆಗೆ ಶಿಬಿರ ಅಲ್ಲಿ ಮುಂದುವರಿಯಲಿದೆ.

‘ಮುಂಬೈ ಸಿಟಿ ಮತ್ತು ಎಟಿಕೆ ಮೋಹನ್ ಬಾಗನ್ ಕ್ಲಬ್‌ಗಳಲ್ಲಿ ಆಡುತ್ತಿರುವ ಆಟಗಾರರು ಕ್ಲಬ್‌ನ ಪಂದ್ಯಗಳು ಮುಗಿದ ಬಳಿಕ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ‘ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ತಿಳಿಸಿದೆ.

ಅಂತಿಮ ಸುತ್ತಿನ ಪಂದ್ಯಗಳಿಗೆ ಭಾರತ ತಂಡವು ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಾಂಗ್‌ಕಾಂಗ್, ಅಫ್ಗಾನಿಸ್ತಾನ ಮತ್ತು ಕಾಂಬೋಡಿಯಾ ಇದೇ ಗುಂಪಿನಲ್ಲಿವೆ. ಭಾರತ ಮೊದಲ ಪಂದ್ಯದಲ್ಲಿ ಕಾಂಬೋಡಿಯಾವನ್ನು ಎದುರಿಸಲಿದೆ.

2023ರಲ್ಲಿ ಏಷ್ಯಾಕಪ್ ಟೂರ್ನಿಯು ಚೀನಾದಲ್ಲಿ ನಿಗದಿಯಾಗಿದೆ.

ಸಂಭವನೀಯರ ತಂಡ: ಗೋಲ್‌ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಪ್ರಭುಶುಕನ್ ಗಿಲ್, ಮೊಹಮ್ಮದ್ ನವಾಜ್, ಟಿಪಿ ರೆಹನೇಶ್.

ಡಿಫೆಂಡರ್ಸ್: ಪ್ರೀತಮ್ ಕೋಟಲ್, ಅಶುತೋಷ್ ಮೆಹ್ತಾ, ಆಶಿಶ್‌ ರಾಯ್‌, ಹರ್ಮಿಪಾಮ್ ರುವಾಹ್, ರಾಹುಲ್ ಭೆಕೆ, ಸಂದೇಶ್ ಜಿಂಗಾನ್‌, ನರೇಂದರ್ ಗೆಹ್ಲೋಟ್, ಚಿಂಗ್ಲೆನ್ಸನಾ ಸಿಂಗ್, ಅನ್ವರ್ ಅಲಿ, ಸುಭಾಶಿಶ್ ಬೋಸ್, ಆಕಾಶ್ ಮಿಶ್ರಾ, ರೋಷನ್ ಸಿಂಗ್, ಹರ್ಮನ್‌ಜೋತ್ ಸಿಂಗ್ ಖಾಬ್ರಾ.

ಮಿಡ್‌ಫೀಲ್ಡರ್ಸ್: ಉದಾಂತ ಸಿಂಗ್, ವಿಕ್ರಮ್ ಪ್ರತಾಪ್‌ ಸಿಂಗ್, ಅನಿರುದ್ಧ್ ಥಾಪಾ, ಪ್ರಣಯ್ ಹಲ್ದಾರ್‌, ಜೀಕ್ಸನ್ ಸಿಂಗ್, ಗ್ಲ್ಯಾನ್‌ ಮಾರ್ಟಿನ್ಸ್, ವಿಪಿ ಸುಹೈರ್‌, ಲಾಲೆಂಗ್‌ಮಾವಿಯಾ, ಸಹಲ್ ಅಬ್ದುಲ್ ಸಮದ್, ಯಾಸಿರ್ ಮೊಹಮ್ಮದ್, ಲಾಲಿಯನ್ಜುವಾಲಾ ಚಾಂಗ್ಟೆ, ಸುರೇಶ್ ಸಿಂಗ್, ಬ್ರೆಂಡನ್‌ ಫೆರ್ನಾಂಡಿಸ್, ಋತ್ವಿಕ್ ಕುಮಾರ್ ದಾಸ್, ಲಾಲ್‌ಥಂಗಾ ಖಾವ್ಲ್‌ರಿಂಗ್‌, ರಾಹುಲ್ ಕೆ.ಪಿ, ಲಿಸ್ಟನ್ ಕೊಲಾಕೊ, ಬಿಪಿನ್ ಸಿಂಗ್, ಆಶಿಕ್ ಕುರುನಿಯನ್.

ಫಾರ್ವರ್ಡ್ಸ್: ಮನ್ವೀರ್ ಸಿಂಗ್‌, ಸುನಿಲ್ ಚೆಟ್ರಿ, ರಹೀಂ ಅಲಿ, ಇಶಾನ್‌ ಪಂಡಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.