ಫುಟ್‌ಬಾಲ್‌: ಬೆಂಗಳೂರು ಇಂಡಿಪೆಂಡೆಂಟ್ಸ್‌ ಜಯಭೇರಿ

7

ಫುಟ್‌ಬಾಲ್‌: ಬೆಂಗಳೂರು ಇಂಡಿಪೆಂಡೆಂಟ್ಸ್‌ ಜಯಭೇರಿ

Published:
Updated:

ಬೆಂಗಳೂರು: ಡಿಸೋಜ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌ 6–1 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಸಿಐಎಲ್‌ ತಂಡದ ಕಪಿಲನ್‌ ಎರಡನೇ ನಿಮಿಷದಲ್ಲಿ ಗೋಲು ಹೊಡೆದರು. ನಂತರ ಬೆಂಗಳೂರು ಇಂಡಿಪೆಂಡೆಂಟ್ಸ್‌ ಪ್ರಾಬಲ್ಯ ಮೆರೆಯಿತು. ಏಳನೇ ನಿಮಿಷದಲ್ಲಿ ಡಿಸೋಜ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು.

19ನೇ ನಿಮಿಷದಲ್ಲಿ ಮುರಳಿ ಚೆಂಡನ್ನು ಗುರಿ ತಲುಪಿಸಿದರು. 29ನೇ ನಿಮಿಷದಲ್ಲಿ ಮೋಡಿ ಮಾಡಿದ ನರೇಂದ್ರ ತಂಡಕ್ಕೆ 3–1 ಮುನ್ನಡೆ ತಂದುಕೊಟ್ಟರು. 42ನೇ ನಿಮಿಷದಲ್ಲಿ ಡಿಸೋಜ ಮತ್ತೊಮ್ಮೆ ಕಾಲ್ಚಳಕ ತೋರಿದರು. 44 ಮತ್ತು 55ನೇ ನಿಮಿಷಗಳಲ್ಲಿ ಕ್ರಮವಾಗಿ ಸುಬಿನ್‌ ಮತ್ತು ಕಿರಣ್‌ ಗೋಲು ದಾಖಲಿಸಿ ಬೆಂಗಳೂರು ಇಂಡಿಪೆಂಡೆಂಟ್ಸ್‌, ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಬಿಯುಎಫ್‌ಸಿ ಮತ್ತು ಎಜಿಒಆರ್‌ಸಿ ಎಫ್‌ಸಿ ನಡುವಣ ‘ಎ’ ಡಿವಿಷನ್‌ ಲೀಗ್‌ ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು.

ಬಿಯುಎಫ್‌ಸಿ ತಂಡದ ಚಿನುಡ್‌ ಮತ್ತು ಕ್ಲಿವರ್ಟ್‌ ಕ್ರಮವಾಗಿ 26 ಮತ್ತು 27ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಎಜಿಒಆರ್‌ಸಿ ತಂಡದ ನರೇಶ್‌ (9ನೇ ನಿ.) ಮತ್ತು ಸತ್ಯಸಿಲ್ತಪ್ಪ  (34ನೇ ನಿ.) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !