ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿ: 16ರ ಘಟ್ಟಕ್ಕೆ ಸ್ವಿಟ್ಜರ್ಲೆಂಡ್‌

ಸರ್ಬಿಯಾ ತಂಡಕ್ಕೆ 2–3ರಿಂದ ಸೋಲು
Last Updated 3 ಡಿಸೆಂಬರ್ 2022, 16:11 IST
ಅಕ್ಷರ ಗಾತ್ರ

ದೋಹಾ: ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಸರ್ಬಿಯಾ ತಂಡಕ್ಕೆ ಸೋಲುಣಿಸಿದ ಸ್ವಿಟ್ಜರ್ಲೆಂಡ್‌ ತಂಡವು ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ತಲುಪಿತು.

ಇಲ್ಲಿಯ ಸ್ಟೇಡಿಯಂ 974 ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್‌ 3–2ರಿಂದ ಸರ್ಬಿಯಾ ವಿರುದ್ಧ ಗೆದ್ದಿತು.

ಶೆರ್ಡಾನ್ ಶಾಕಿರಿ 20ನೇ ನಿಮಿಷದಲ್ಲಿ ಗಳಿಸಿದ ಗೋಲು ಸ್ವಿಟ್ಜರ್ಲೆಂಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಆದರೆಮೊದಲಾರ್ಧದ ಅವಧಿಯಲ್ಲೇ ಅಲೆಕ್ಸಾಂಡರ್‌ ಮಿಟ್ರೊವಿಚ್‌ (ಹೆಡರ್‌) ಮತ್ತುದುಸಾನ್‌ ವ್ಲಾಹೊವಿಚ್‌ ದಾಖಲಿಸಿದ ಗೋಲುಗಳಿಂದ ಸರ್ಬಿಯಾ ಗೆಲುವಿನ ನಿರೀಕ್ಷೆ ಮೂಡಿಸಿತ್ತು.

ಮೊದಲಾರ್ಧದ ಮುಗಿಯಲು ಕೇವಲ ಒಂದು ನಿಮಿಷ ಇರುವಾಗ ಬ್ರೀಲ್ ಎಂಬೊಲೊ ಸ್ವಿಸ್‌ ಪರ ಸಮಬಲದ ಗೋಲು ಹೊಡೆದರು. ಇದಾದ ನಾಲ್ಕನೇ ನಿಮಿಷದಲ್ಲೇ ರೆಮೊ ಫ್ರೆಲರ್‌ತೋರಿದ ಕಾಲ್ಚಳಕ ತಂಡದ ಗೆಲುವಿಗೆ ಕಾರಣವಾಯಿತು.

ಈ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ ತಂಡದ ಆಟಗಾರರಾದ ಶಾಕಿರಿ ಮತ್ತು ಕ್ಸಾಕಾ ಅವರು ಕೊಸೊವೊ ಪರ ಸನ್ನೆಗಳನ್ನು ಮಾಡಿ ಸಂಭ್ರಮಿಸಿದ್ದು ಸರ್ಬಿಯಾ ಆಟಗಾರರನ್ನು ಕೆರಳಿಸಿತ್ತು. ಹೀಗಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ತಾರತಮ್ಯದ ಮಾತು ಮತ್ತು ಸನ್ನೆಗಳನ್ನು ಮಾಡದಂತೆ ಸಂಘಟಕರು ಆಟಗಾರರಿಗೆ ಮನವಿ ಮಾಡಿದರು.

ಐದು ವಿಶ್ವಕಪ್‌ ಟೂರ್ನಿಗಳಲ್ಲಿ ನಾಲ್ಕನೇ ಬಾರಿ ಸ್ವಿಟ್ಜರ್ಲೆಂಡ್ ತಂಡವು ನಾಕೌಟ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT