ಬಾರ್ಸಿಲೋನಾ: ಸ್ಪೇನ್‌ನ ಯುವ ಫುಟ್‌ಬಾಲ್ ತಾರೆ ಲಮಿನ್ ಯಮಲ್ ಅವರ ತಂದೆಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗೆ ಶೋಧ ನಡೆಯುತ್ತಿದೆ.

ಇಲ್ಲಿಂದ 30 ಕಿ.ಮೀ. ದೂರವಿರುವ ಕೆಟಲಾನ್ ಪಟ್ಟಣ ಮತಾರೊದಲ್ಲಿ ಸಂಜೆ 7.10ರ ಸುಮಾರಿಗೆ ಕಾರ್ ಪಾರ್ಕ್‌ನಲ್ಲಿ ಈ ದಾಳಿ ನಡೆದಿದೆ ಎಂದು ಕೆಟಲಾನ್ ಪ್ರಾಂತ್ಯ ಪೊಲೀಸ್ ಪಡೆಯ ವಕ್ತಾರ ಮೊಸೊಸ್ ಡಿ‘ ಎಸ್ಕ್ವಾಂಡ್ರ ತಿಳಿಸಿದ್ದಾರೆ. ಇಲ್ಲಿಯ ರೊಕಾಫೊಂಡಾ ಯಮಲ್ ಅವರ ಹುಟ್ಟೂರು.

ಯಮಲ್ ತಂದೆ ಮುನಿರ್ ನಸ್ರೋಯಿ ಅವರಿಗೆ ಹಲವು ಬಾರಿ ಇರಿಯಲಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಸಂಪರ್ಕಿಸಲು ಸುದ್ದಿಸಂಸ್ಥೆ ನಡೆಸಿದ ಯತ್ನ ಸಫಲವಾಗಲಿಲ್ಲ.

ಗಂಭೀರ ಗಾಯಗೊಂಡ ನಸರೊಯಿ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರಿಗೆ ಸಮೀಪದ ಮೂಲಗಳು ತಿಳಿಸಿವೆ.

ದಾಳಿಗೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖಾಧಿಕಾರಿಗಳು ಯಮಲ್ ಅವರ ತಂದೆಯಿಂದ ಮಾಹಿತಿ ಪಡೆಯಲಿದ್ದಾರೆ. ಯಮಲ್ ತಂದೆ ಅವರು ನಾಯಿ ಜೊತೆ ವಿಹಾರ ನಡೆಸುತ್ತಿದ್ದಾಗ, ಅವರಿಗೆ ಕೆಲವರ ಜೊತೆ ವಾಗ್ವಾದ ನಡೆದಿದೆ. ಅವರು ಮರಳಿ ಬಂದು ದಾಳಿ ನಡೆಸಿದ್ದಾರೆ ಎಂದು ಲಾ ವಾನ್‌ಗಾರ್ಡಿಯಾ ಪತ್ರಿಕೆ ತಿಳಿಸಿದೆ.

ಯಮಲ್ ಅವರು 15ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಎಫ್‌ಸಿಗೆ ಪದಾರ್ಪಣೆ ಮಾಡಿದ್ದರು. ಕೆಲವೇ ತಿಂಗಳಲ್ಲಿ ತಂಡದ ಪ್ರಮುಖ ಆಟಗಾರನಾಗಿ ಬೆಳೆದರು. ಯುರೊ ಕಪ್‌ನಲ್ಲೂ ಈ ಫಾರ್ವರ್ಡ್ ಆಟಗಾರ ಗಮನ ಸೆಳೆದಿದ್ದರು.

ನಸ್ರೋಯಿ ಅವರು ಯುರೋಪಿಯನ್ ಚಾಂಪಿಯನ್‌ಷಿಪ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮ ಸಂದರ್ಶನಗಳಲ್ಲಿ ಕಾಣಿಸಿ ಪ್ರಸಿದ್ಧಿಗೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.