ಶನಿವಾರ, ಮೇ 30, 2020
27 °C

ತುರ್ಕಮೆನಿಸ್ತಾನದಲ್ಲಿ ಫುಟ್‌ಬಾಲ್‌ ಪುನರಾರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಅಸ್ಗಾಬತ್‌ (ತುರ್ಕಮೆನಿಸ್ತಾನ): ಕೋವಿಡ್‌–19 ಪಿಡುಗು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕ್ರೀಡಾ ಕ್ಷೇತ್ರದ ಮೇಲೂ ಕೊರೊನಾ ಕಾರ್ಮೋಡ ದಟ್ಟೈಸಿದೆ. 

ಇದೆಲ್ಲದರ ನಡುವೆ ಈಗ ತುರ್ಕಮೆನಿಸ್ತಾನದಲ್ಲಿ ಫುಟ್‌ಬಾಲ್‌ ಚಟುವಟಿಕೆಗಳು ಗರಿಗೆದರಿವೆ. ಪ್ರತಿಷ್ಠಿತ ಯೊಕಾರಿ ಲೀಗ್‌ ಪುನರಾರಂಭಿಸಲು ತುರ್ಕಮೆನಿಸ್ತಾನ ಫುಟ್‌ಬಾಲ್‌ ಫೆಡರೇಷನ್‌ ನಿರ್ಧರಿಸಿದೆ.

ಭಾನುವಾರ ನಡೆಯುವ ಅಲತಿನ್‌ ಅಸಿರ್‌ ಮತ್ತು ಕೊಪೆತ್‌ದಾಗ್‌ ನಡುವಣ ಹಣಾಹಣಿಯು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ. ಮಾರ್ಚ್‌ 6ರಂದು ಈ ಬಾರಿಯ ಲೀಗ್‌ಗೆ ಚಾಲನೆ ನೀಡಲಾಗಿತ್ತು. ಬಳಿಕ ಕೊರೊನಾ ಭೀತಿಯಿಂದಾಗಿ ಇದನ್ನು ಮುಂದೂಡಲಾಗಿತ್ತು.

‘ನಮ್ಮ ದೇಶವು ಕೊರೊನಾ ವೈರಾಣುವಿನಿಂದ ಮುಕ್ತವಾಗಿದೆ. ಹೀಗಾಗಿ ಲೀಗ್‌ ಪುನರಾರಂಭಿಸಲಾಗಿದೆ. ಈ ಬೆಳವಣಿಗೆ ನಮಗೆಲ್ಲರಿಗೂ ಅತೀವ ಸಂತಸ ನೀಡಿದೆ. ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಲು ಕಾತರನಾಗಿದ್ದೇನೆ’ ಎಂದು ಆಶೀರ್‌ ಯೂಸುಪೊವ್ ಎಂಬ ಉದ್ಯಮಿ ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.