ಶನಿವಾರ, ಏಪ್ರಿಲ್ 1, 2023
23 °C

ನೋಡಿ: ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿದ ಅಮೆರಿಕದ ಫುಟ್‌ಬಾಲ್ ಆಟಗಾರ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮೇಜರ್ ಲೀಗ್ ಸಾಸರ್ (ಎಂಎಲ್ಎಸ್) ನಲ್ಲಿ ಭಾನುವಾರ ಸ್ಯಾನ್ ಜೋಸ್ ಅರ್ಥ್‌ಕ್ವೇಕ್ ವಿರುದ್ಧ ತನ್ನ ಕ್ಲಬ್ ಮಿನ್ನೇಸೋಟ ಎಫ್‌ಸಿ 2-2ರ ಸಮಬಲ ಸಾಧಿಸಿದ ನಂತರ ಅಮೆರಿಕದ ಫುಟ್‌ಬಾಲ್ ಆಟಗಾರ ಹಸಾನಿ ಡಾಟ್ಸನ್ ಸ್ಟೀಫನ್‌ಸನ್ ಫುಟ್‌ಬಾಲ್ ಪಿಚ್‌ನಲ್ಲಿಯೇ ತನ್ನ ಪ್ರೇಯಸಿಗೆ ಪ್ರೇಮನಿವೇದನೆ ಮಾಡಿದ್ದಾರೆ.

ಅಭಿಮಾನಿಗಳು ಮೆಚ್ಚುಗೆಯಿಂದ ಕೂಗಾಡುತ್ತಿರುವಾಗಲೇ ಸ್ಟೀಫನ್‌ಸನ್ ಮೊಣಕಾಲೂರಿ ತನ್ನ ಪ್ರೇಯಸಿಗೆ ಉಂಗುರವನ್ನು ಹಾಕಿ ಪ್ರೇಮ ನಿವೇದನೆ ಮಾಡಿದ್ದಾರೆ. ಇದಕ್ಕೆ ಆಕೆ ಒಪ್ಪಿಗೆ ಸೂಚಿಸುವಂತೆ ತಲೆಯಾಡಿಸಿದರು. ಜೋಡಿಯಿಬ್ಬರು ಮೈದಾನದಲ್ಲೇ ಅಪ್ಪಿಕೊಂಡರು. ಈ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು.

ಈ ಕುರಿತು ಸ್ಟೀಫನ್‌ಸನ್ ಅವರ ಪ್ರೇಯಸಿ ಪೆಟ್ರಾ ವುಕೊವಿಕ್ ಕೂಡ ಚಿತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 'ನನ್ನ ಹೃದಯಕ್ಕೆ ಆಗುತ್ತಿರುವ ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ನಿಮ್ಮಿಂದ ಪ್ರೀತಿಸಲ್ಪಡುವುದು ಆಶೀರ್ವಾದ ಹಸಾನಿ'. ಶುಭಾಷಯ ಕೋರಿದ ಎಲ್ಲರಿಗೂ ಮತ್ತು ಈ ಸುಂದರವಾದ ಶಾಶ್ವತ ನೆನಪನ್ನು ನನ್ನ ಜೀವನದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು' ಎಂದು ಹೇಳಿಕೊಂಡಿದ್ದಾರೆ.

ಇದರೊಂದಿಗೆ ಸ್ಟೀಫನ್‌ಸನ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವುಕೊವಿಕ್ ಅವರೊಂದಿಗಿರುವ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೂನ್ 7ರಂದು ಫೋಟೊವನ್ನು ಹಂಚಿಕೊಂಡು 'ನಿಜವಾಗಿ ಆಶೀರ್ವದಿಸಲ್ಪಟ್ಟಿದೆ' ಎಂದು ಬರೆದುಕೊಂಡಿದ್ದಾರೆ.

11 ಪಂದ್ಯಗಳಿಂದ 15 ಪಾಯಿಂಟ್‌ಗಳೊಂದಿಗೆ ಸ್ಟೀಫನ್‌ಸನ್‌ರ ಕ್ಲಬ್ ಮಿನ್ನೇಸೋಟ ವೆಸ್ಟರ್ನ್ ಕಾನ್ಫರೆನ್ಸ್‌ನಲ್ಲಿ 6ನೇ ಸ್ಥಾನದಲ್ಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು