ಸೋಮವಾರ, ಫೆಬ್ರವರಿ 17, 2020
30 °C

ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌: ಮಣಿಪುರ ತಂಡಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭರವಸೆಯಿಂದ ಕಣಕ್ಕೆ ಇಳಿದ ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡ ಎದುರಾಳಿಗಳ ಆಟದ ಮುಂದೆ ಮಂಕಾಯಿತು. ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನ ನಾಲ್ಕನೇ ಆವೃತ್ತಿಯ ಮುಖ್ಯ ಸುತ್ತಿನ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ತಂಡ ಮಣಿಪುರದ ಕೆಆರ್‌ವೈಎಚ್‌ಪಿಎಸ್‌ ತಂಡಕ್ಕೆ 0–4ರಲ್ಲಿ ಮಣಿಯಿತು.

ನಾಯಕಿ ಡಂಗ್‌ಮೆ ಗ್ರೇಸ್‌ 14ನೇ ನಿಮಿಷದಲ್ಲೇ ಗೋಲು ಗಳಿಸಿ ಕೆಆರ್‌ವೈಎಚ್‌ಪಿಎಸ್‌ಗೆ ಮುನ್ನಡೆ ತಂದುಕೊಟ್ಟರು. ಇದಾಗಿ ಐದೇ ನಿಮಿಷಗಳಲ್ಲಿ ಅಂಜು ತಮಂಗ್‌ ಚೆಂಡನ್ನು ಗುರಿ ಮುಟ್ಟಿಸಿದರು. ಎರಡು ಗೋಲುಗಳ ಆರಂಭಿಕ ಮುನ್ನಡೆಯಿಂದ ಭರವಸೆ ಹೆಚ್ಚಿಸಿಕೊಂಡ ಮಣಿಪುರದ ತಂಡ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಿತು.

35ನೇ ನಿಮಿಷದಲ್ಲಿ ಡಂಗ್‌ಮೆ ಗ್ರೇಸ್‌ ಮತ್ತೊಂದು ಗೋಲು ಗಳಿಸಿ ಸಂಭ್ರಮಿಸಿದರು. ‌ದ್ವಿತೀಯಾರ್ಧದಲ್ಲಿ ಕಿಕ್‌ಸ್ಟಾರ್ಟ್ ತಿರುಗೇಟು ನೀಡಲು ನಡೆಸಿದ ಪ್ರಯ ತ್ನಗಳಿಗೆ ಫಲ ಸಿಗಲಿಲ್ಲ. ಆದರೆ ಎದುರಾಳಿ ತಂಡ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿ ಪೆಟ್ಟು ನೀಡಿತು. 63ನೇ ನಿಮಿಷದಲ್ಲಿ ರತನ್ ಬಾಲಾ ದೇವಿ ಗೋಲು ಗಳಿಸಿದರು.

ಸೇತು ಎಫ್‌ಸಿಗೆ ಗೆಲುವು: ದಿನದ ಮತ್ತೊಂದು ಪಂದ್ಯದಲ್ಲಿ ಸೇತು ಎಫ್‌ಸಿ 5–0ಯಿಂದ ಎಫ್‌ಸಿ ಕೊಲ್ಹಾಪುರ್ ಸಿಟಿಯನ್ನು ಮಣಿಸಿತು. ಹಂಸವಲ್ಲಿ (31ನೇ ನಿಮಿಷ), ಸಂಧ್ಯಾ (61, 66 ಮತ್ತು 90ನೇ ನಿ), ಸುಮಿತ್ರಾ (64ನೇ ನಿ) ಗೋಲು ಗಳಿಸಿದರು.  

ಇಂದಿನ ಪಂದ್ಯಗಳು
ಕೆಂಕ್ರೆ ಎಫ್‌ಸಿ ಮಹಾರಾಷ್ಟ್ರ–ಒಡಿಶಾ ಪೊಲೀಸ್‌ (ಮಧ್ಯಾಹ್ನ 12ಕ್ಕೆ)
ಬಿಬಿಕೆ ಡಿಎವಿ ಎಫ್‌ಸಿ ಪಂಜಾಬ್‌–ಬರೋಡಾ ಎಫ್‌ಸಿ (ಮಧ್ಯಾಹ್ನ 3ಕ್ಕೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು