ಕಠ್ಮಂಡು: ಮಿಡ್ಫೀಲ್ಡ್ನಲ್ಲಿ ಪ್ರಾಬಲ್ಯ ಮೆರೆದ ಬಾಂಗ್ಲಾದೇಶ ತಂಡ ಸ್ಯಾಫ್ ಮಹಿಳಾ ಫುಟ್ಬಾಲ್ ಚಾಂಪಿಯನ್ ಷಿಪ್ನ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಬುಧವಾರ ಭಾರತ ತಂಡವನ್ನು 3–1 ಗೋಲುಗಳಿಂದ ಸೋಲಿಸಿತು.

ಭಾರತ ಈ ಪಂದ್ಯದಲ್ಲಿ ಕೆಲವು ಅವಕಾಶಗಳನ್ನೂ
ವ್ಯರ್ಥಪಡಿಸಿಕೊಂಡಿತು. ಈ ಮೊದಲೇ ಮೂರು ಪಾಯಿಂಟ್ಸ್ ಕಲೆಹಾಕಿ ಸೆಮಿಫೈನಲ್ ಅವಕಾಶ ಖಚಿತಪಡಿಸಿಕೊಂಡಿದ್ದ ಭಾರತ ವನಿತೆಯರು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರು. ಬಾಂಗ್ಲಾದೇಶ (4 ಪಾಯಿಂಟ್ಸ್) ಅಗ್ರಸ್ಥಾನ ಪಡೆಯಿತು.

ಅಫೀದಾ ಖಾಂಡಕರ್ (18ನೇ ನಿಮಿಷ) ಮತ್ತು ತೊಹುರಾ ಖಾತುನ್ (29 ಮತ್ತು 42ನೇ ನಿಮಿಷ) ಬಾಂಗ್ಲಾ ಪರ ಗೋಲು ಗಳಿಸಿದರು. ಭಾರತ ತಂಡದ ಪರ ನಾಯಕಿ ಬಾಲಾ ದೇವಿ 44ನೇ ನಿಮಿಷ ಹೆಡರ್ ಮೂಲಕ ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು. 27ನೇ ನಿಮಿಷ ಅಂಜು ತಮಾಂಗ್ ಗಾಯಗೊಂಡು ನಿರ್ಗಮಿಸಿದ್ದು, ಭಾರತದ ದಾಳಿಯ ಬಲ ಕಡಿಮೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.