ಹಾಕಿ: ಓಂ ಸಾಯಿ ತಂಡಕ್ಕೆ ಗೆಲುವು
ಬೆಂಗಳೂರು: ಧಾರವಾಡದ ಓಂ ಸಾಯಿ ಹಾಕಿ ಕ್ಲಬ್ ತಂಡದವರು ಕೆಎಸ್‌ಎಚ್‌ಎ ‘ಎ’ ಡಿವಿಷನ್ ಹಾಕಿ ಲೀಗ್‌ನಲ್ಲಿ ಗೆದ್ದರು.
ಸೋಮವಾರ ನಡೆದ ಪಂದ್ಯದಲ್ಲಿ ಓಂ ಸಾಯಿ ತಂಡ 5–4 ಗೋಲುಗಳಿಂದ ಬೆಂಗಳೂರು ಯುನೈಟೆಡ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ವಿಜಯಿ ತಂಡದ ಎಂ.ಅರುಣ್ ನಾಲ್ಕು ಗೋಲುಗಳನ್ನು (29, 41, 53, 56ನೇ ನಿ.) ಗಳಿಸಿದರೆ, ಮತ್ತೊಂದು ಗೋಲನ್ನು ಯಶ್ವಿನ್ (23) ತಂದಿತ್ತರು.
ಬೆಂಗಳೂರು ಯುನೈಟೆಡ್ ಪರ ಮಹೇಶ್ವರನ್ (24, 26 ಮತ್ತು 46ನೇ ನಿ.) ಹಾಗೂ ಪವನ್ (35) ಚೆಂಡನ್ನು ಗುರಿ ಸೇರಿಸಿದರು.
ಇನ್ನೊಂದು ಪಂದ್ಯದಲ್ಲಿ ಬಾಂಬರ್ಸ್ ಹಾಕಿ ಕ್ಲಬ್ 2–1 ಗೋಲುಗಳಿಂದ ರೈಸಿಂಗ್ ಸ್ಟಾರ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.