ಮಂಗಳವಾರ, ಆಗಸ್ಟ್ 20, 2019
22 °C
ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌

ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಅನೀಶ್‌ ಭಾನವಾಲಾಗೆ ಚಿನ್ನ

Published:
Updated:
Prajavani

ನವದೆಹಲಿ: ಭಾರತದ ಅನೀಶ್ ಭಾನವಾಲಾ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಟೂರ್ನಿಯ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದ ಸ್ಪರ್ಧೆಯಲ್ಲಿ ಬುಧವಾರ ಚಿನ್ನಕ್ಕೆ ಮುತ್ತಿಟ್ಟರು. ಇದರೊಂದಿಗೆ ಜರ್ಮನಿಯ ಸುಹ್ಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ.

ಅರ್ಹತಾ ಸುತ್ತಿನಲ್ಲಿ ಭಾನವಾಲಾ 584 ಪಾಯಿಂಟ್‌ ಗಳಿಸಿದರೆ, ಫೈನಲ್‌ನಲ್ಲಿ 29 ಪಾಯಿಂಟ್‌ಗಳಿಗೆ ಗುರಿಯಿಟ್ಟು ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಸ್ಪರ್ಧೆಯ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಭಾರತದ ಇತರ ಇಬ್ಬರು ಶೂಟರ್‌ಗಳಾದ ಆದರ್ಶ್‌ ಸಿಂಗ್‌ ಹಾಗೂ ಆಗ್ನೇಯ ಕೌಶಿಕ್‌ ಕ್ರಮವಾಗಿ ನಾಲ್ಕು ಹಾಗೂ ಆರನೇ ಸ್ಥಾನ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು.

ರಷ್ಯಾದ ಇಗೊರ್‌ ಇಸ್ಮಾಕೊವ್‌ 23 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಪದಕ ಒಲಿಸಿಕೊಂಡರೆ, ಜರ್ಮನಿಯ ಫ್ಲೋರಿಯನ್‌ ಪೀಟರ್‌ 19 ಪಾಯಿಂಟ್‌ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾರತ ಇದುವರೆಗೆ ಟೂರ್ನಿಯಲ್ಲಿ ಎಂಟು ಚಿನ್ನ, ಏಳು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. 

 

Post Comments (+)