ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಪ್ರಶಸ್ತಿ

7

ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಚಾಂದಸಿ ಕೃಷ್ಣಮೂರ್ತಿ ಅವರ ನಾಯಕತ್ವದ ಕರ್ನಾಟಕ ತಂಡ 16 ವರ್ಷದೊಳಗಿನವರ ಮಹಿಳೆಯರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಲೀಗ್‌ ಮಾದರಿಯಲ್ಲಿ ನಡೆದ ಟೂರ್ನಿಯ ಎಲ್ಲ ಪಂದ್ಯಗಳನ್ನು ಕರ್ನಾಟಕ ಗೆದ್ದಿತ್ತು.

ಮೊದಲ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಎದುರಾಳಿಯಾಗಿದ್ದದ್ದು ತಮಿಳುನಾಡು ತಂಡ. ಈ ಪಂದ್ಯದಲ್ಲಿ ಕರ್ನಾಟಕ ಐದು ವಿಕೆಟ್‌ಗಳಿಂದ ಗೆದ್ದಿತು. ನಂತರ ಆಂಧ್ರಪ್ರದೇಶ ಎದುರು ಏಳು ವಿಕೆಟ್‌ಗಳ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಹೈದರಾಬಾದ್ ಎದುರು ಆರು ವಿಕೆಟ್‌ಗಳಿಂದ ಗೆದ್ದ ಕರ್ನಾಟಕ, ನಂತರ ಗೋವಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.

ಪುದುಚೇರಿ ವಿರುದ್ಧ 122 ರನ್‌ಗಳಿಂದ ಗೆದ್ದ ತಂಡ ನಂತರ ಕೇರಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !